ಮಾನಸಗಂಗೋತ್ರಿ ಆವರಣದಲ್ಲಿ IB ನಿವೃತ್ತ ಅಧಿಕಾರಿ ಹತ್ಯೆ ಪ್ರಕರಣ:  ಇಬ್ಬರ ಬಂಧನ.

ಮೈಸೂರು, ನವೆಂಬರ್,8,2022(www.justkannada.in):  ನವೆಂಬರ್ 4ರ ಶುಕ್ರವಾರ ಸಂಜೆ  ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ  ಆವರಣದಲ್ಲಿ  ಅಪರಿಚಿತ ವಾಹನದಿಂದ   ಡಿಕ್ಕಿ ಹೊಡೆಸಿ ಕೇಂದ್ರ ಗುಪ್ತಚರ ದಳದ(Intelligence Bureau-IB) ನಿವೃತ್ತ ಅಧಿಕಾರಿಯೋರ್ವರನ್ನು ಹತ್ಯೆಗೈಯ್ಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಲಕ್ಷ್ಮಿಪುರಂ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇಂದ್ರ ಗುಪ್ತಚರ ದಳದ ನಿವೃತ್ತ ಅಧಿಕಾರಿ ಆರ್.ಎನ್.ಕುಲಕರ್ಣಿ ಕೊಲೆ ಕುರಿತಂತೆ  ವಿಶೇಷ ತಂಡ   ತನಿಖೆ ನಡೆಸುತ್ತಿತ್ತು.  ತನಿಖೆ ವೇಳೆ ಕುಲಕರ್ಣಿಯವರ ಪಕ್ಕದ ಮನೆಯ ಮಾದಪ್ಪ ಮತ್ತು ಆರ್.ಎನ್.ಕುಲಕರ್ಣಿ ನಡುವೆ ಮನೆ ಕಟ್ಟುವ ವಿಚಾರವಾಗಿ ಗಲಾಟೆ ನಡೆದಿತ್ತು ಎಂಬ ಬಗ್ಗೆ ಮಾಹಿತಿ ಲಭಿಸಿತ್ತು.  ಈ ಸಂಬಂಧ ವಿಶೇಷ ತಂಡ ತನಿಖೆ ಮುಂದುವರಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.  ಮಾದಪ್ಪನ ಪುತ್ರ , ಕಟ್ಟಡ ಕಾಮಗಾರಿಗಳಲ್ಲಿ ತೊಡಗಿಸಿಕೊಂಡಿದ್ದ  ಮನು(30) ಹಾಗೂ ಇತನ ಸ್ನೇಹಿತ ವರುಣ್ ಬಂಧಿತ ಆರೋಪಿಗಳು.

ಮನುವಿನ  ಸ್ನೇಹಿತ ವರುಣ್ ಎಂಬಾತ  ಆರ್.ಎನ್ ಕುಲಕರ್ಣಿ ವಾಯುವಿಹಾರಕ್ಕೆ ಬರುತ್ತಿದ್ದ ಸ್ಥಳಗಳನ್ನು ದ್ವಿಚಕ್ರವಾಹನದಲ್ಲಿ ಕರೆತಂದು ತೋರಿಸಿದ್ದು, ಇಬ್ಬರೂ ಸೇರಿ ಕೊಲೆಗೆ ಸ್ಕೆಚ್ ರೂಪಿಸಿದ್ದರು ಎನ್ನಲಾಗಿದೆ. ಮನು ತನ್ನ ತಂದೆ ಮಾದಪ್ಪನಿಗೂ ವಿಚಾರ ತಿಳಿಸದೇ ಆರ್.ಎನ್.ಕುಲರ್ಣಿಯವರ ಹತ್ಯೆಗೆ ಮುಂದಾಗಿದ್ದನು ಎನ್ನಲಾಗಿದೆ. ಸಿಸಿಟಿವಿಯಲ್ಲಿ ಆಧರಿಸಿದ ದೃಶ್ಯಗಳನ್ನು ತಪಾಸಣೆ ನಡೆಸಿದ ಪೊಲೀಸರಿಗೆ ದ್ವಿಚಕ್ರವಾಹನದಲ್ಲಿ ವ್ಯಕ್ತಿಯೋರ್ವ ಬಂದು ಸ್ಥಳ ತೋರಿಸಿರುವ ಕುರಿತು ಅನುಮಾನಗಳು ಹುಟ್ಟಿಕೊಂಡು ಠಾಣೆಗೆ ಕರೆಸಿ ತೀವ್ರ ವಿಚಾರಣೆಗೊಳಪಡಿಸಲಾಗಿ ಬಾಯ್ಬಿಟ್ಟಿದ್ದ ಎನ್ನಲಾಗಿದೆ. ಇನ್ನೂ ಕೂಡ ಪ್ರಕರಣ ಸಂಬಂಧ ತೀವ್ರ ವಿಚಾರಣೆ ನಡೆಯುತ್ತಿದೆ ಎನ್ನಲಾಗಿದೆ.

ಘಟನೆ ಹಿನ್ನೆಲೆ

ಕೇಂದ್ರ ಗುಪ್ತಚರ ಇಲಾಖೆ (Intelligence Bureau-IB) ನಿವೃತ್ತ ಅಧಿಕಾರಿ ಆರ್.ಎಸ್.ಕುಲಕರ್ಣಿ (83)  ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಮಾನಸಗಂಗೋತ್ರಿ ವಿಶ್ವವಿದ್ಯಾಲಯದ  ಕ್ಯಾಂಪಸ್‌ ನಲ್ಲಿ ನ.4ರಂದು ಸಂಜೆ ನಡೆದಿತ್ತು.   ಅವರು ಕ್ಯಾಂಪಸ್ ನ ಕಂಪ್ಯೂಟರ್ ಸೈನ್ಸ್ ವಿಭಾಗದ ಪಕ್ಕದ ರಸ್ತೆಯಲ್ಲಿ  ವಾಯುವಿಹಾರ ನಡೆಸುತ್ತಿದ್ದರು. ಈ ವೇಳೆ ಕಾರು ಡಿಕ್ಕಿಯಾಗಿದೆ. ಇದರಿಂದ ಗಾಯಗೊಂಡಿದ್ದ ಆರ್.ಎಸ್.ಕುಲಕರ್ಣಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕುಲಕರ್ಣಿ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪ ಮಾಡಿದ್ದರು. ಜಯಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರು ಅಪಘಾತ ಮಾಡಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ನಿವೃತ್ತ ಅಧಿಕಾರಿ ಪಕ್ಕಕ್ಕೆ ಹೋದರೂ ಡಿಕ್ಕಿ ಹೊಡೆದಿರುವುದು ಸೆರೆಯಾಗಿತ್ತು. ಅಪಘಾತಕ್ಕೆ ನಂಬರ್ ಪ್ಲೇಟ್ ಇಲ್ಲದ ಕಾರು ಬಳಸಿದ್ದು, ಯೋಜಿತ ಕೊಲೆ ಎಂದು ಶಂಕೆ ವ್ಯಕ್ತವಾಗಿತ್ತು.   ಪೊಲೀಸರು ಇದನ್ನು ಕೊಲೆ ಪ್ರಕರಣ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಇದೀಗ ಪ್ರಕರಣ ಸಂಬಂಧ  ಇಬ್ಬರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Key words: Retired- IB officer- murder case – mysore-two- arrested.

ENGLISH SUMMARY…

Incident of retd. IB officer’s murder in Manasa Gangotri campus: Two held
Mysuru, November 8, 2022 (www.justkannada.in): A retired officer of the Central Intelligence Bureau – IB was killed in an accident in the Manasa Gangotri campus in Mysuru, on November 4, Friday evening. The Jayalakshmipuram police have been successful in nabbing two persons in this case.
The family members of R. N. Kulkarni, a retired IB officer who died in the accident had alleged that the accident was purposeful and a murderous act. A special police force was pressed into service to investigate the case. A person named Madappa, was a neighbour of the deceased R.N. Kulkarni. The duo had a quarrel regarding construction of the house by the former. Taking the clue, the police have been successful in nabbing two persons in the case. Manu (30), son of Madappa, a contractor and his friend Varun are the two persons who have been held.
Manu and his friend Varun had observed R.N. Kulkarni’s movement. They had noticed that he used to go walking generally in the place where the incident took place. Accordingly, the duo planned to kill him. It is said that Manu made the plan even without informing his father Madappa. Tracing the CCTV footage the police grew suspicious on two persons who had visited the spot in a two-wheeler, where one person is showing the place. The police grew suspicious and held the duo and interrogated, following which they confessed. Further investigation and interrogations are on.
Keywords: Manasa Gangotri/ Retd. IB officer/ R.N. Kulkarni/ murder/ accident/ two held