ನಾಲ್ಕು ಬಾರಿ ರಾಜೀನಾಮೆ: ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಒಮ್ಮೆಯೂ ಪೂರ್ಣ ಅವಧಿ ಪೂರ್ಣಗೊಳಿಸುವುದು ಸಾಧ್ಯವಾಗಲಿಲ್ಲವೇಕೆ?

ಬೆಂಗಳೂರು, ಜುಲೈ 26, 2021 (www.justkannada.in): ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷದ ಅತ್ಯಂತ ವಿಶ್ವಾಸಾರ್ಹ ಹಾಗೂ ಬಲಿಷ್ಠ ನಾಯಕ ಎನಿಸಿಕೊಂಡಿರುವ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಒಮ್ಮೆಯೂ ಸಹ 5 ವರ್ಷ ಅವಧಿಯನ್ನು ಪೂರ್ಣಗೊಳಿಸುವುದು ಸಾಧ್ಯವಾಗಲಿಲ್ಲ. ಜುಲೈ 26, 2021 ರಂದು ಸೋಮವಾರ ತಮ್ಮ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಸಲ್ಲಿಸಿರುವ ಯಡಿಯೂರಪ್ಪ ಅವರಿಗೆ ಇದು ರಾಜೀನಾಮೆ ನೀಡುತ್ತಿರುವ ಮೊಟ್ಟ ಮೊದಲ ಪ್ರಸಂಗವೇನೂ ಅಲ್ಲ.jk

ಈ ಹಿಂದೆ ಮೂರು ಬಾರಿ ಮುಖ್ಯಮಂತ್ರಿ ಪದವಿ ಲಭಿಸಿ, ಮೂರು ಬಾರಿಯೂ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಸಲ್ಲಿಸಲು ಕಾರಣ ಹಾಗೂ ಸಂದರ್ಭಗಳೇನಿತ್ತು ಎಂದು ತಿಳಿದುಕೊಳ್ಳಲು ಇಲ್ಲಿ ಒಂದು ಸಣ್ಣ ಪ್ರಯತ್ನ ಮಾಡಲಾಗಿದೆ.

ನವೆಂಬರ್ ೧೯, ೨೦೦೭: ಎಂಟು ದಿನಗಳ ಮುಖ್ಯಮಂತ್ರಿ

ಜನವರಿ ೨೦೦೬ರಲ್ಲಿ ಜೆಡಿಎಸ್ ಪಕ್ಷ ತನ್ನ ಅಂದಿನ ಮೈತ್ರಿ ಪಕ್ಷವಾಗಿದ್ದಂತಹ ಕಾಂಗ್ರೆಸ್‌ ಗೆ ನೀಡಿದ್ದಂತಹ ಬೆಂಬಲವನ್ನು ಹಿಂದಕ್ಕೆ ಪಡೆಯಿತು. ನಂತರ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದರೆ ಬಿ.ಎಸ್. ಯಡಿಯೂರಪ್ಪ ಅವರು ಉಪ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು. ಆದರೆ ಆಗ ಆ ಮೈತ್ರಿಯ ಒಪ್ಪಂದದ ಪ್ರಕಾರ ಹೆಚ್.ಡಿ. ಕುಮಾರಸ್ವಾಮಿ ಮತ್ತು ಬಿ.ಎಸ್. ಯಡಿಯೂರಪ್ಪ ಅವರು ೨೦:೨೦ ತಿಂಗಳ ಅವಧಿಗೆ ಮುಖ್ಯಮಂತ್ರಿಯಾಗಬೇಕಿತ್ತು.  ಕುಮಾರಸ್ವಾಮಿ ಅವರು ೨೦ ತಿಂಗಳ ನಂತರ ತಮ್ಮ ಅಧಿಕಾರವನ್ನು ಯಡಿಯೂರಪ್ಪ ಅವರಿಗೆ ಹಸ್ತಾಂತರ ಮಾಡಬೇಕಾಗಿತ್ತು. ಆದರೆ ೨೦ ತಿಂಗಳ ನಂತರ, ಅಕ್ಟೋಬರ್ ತಿಂಗಳಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದರು.

2007ರಲ್ಲಿ ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಚುನಾಯಿತಗೊಂಡ ಬಿಜೆಪಿ ಸರ್ಕಾರ, ವಿಶ್ವಾಸಮತ ಯಾಚನೆ ನಡೆದಾಗ ಬಿಜೆಪಿಯ ಮೈತ್ರಿ ಪಕ್ಷವಾದ ಜೆಡಿಎಸ್, ಬಿಜೆಪಿ ವಿರುದ್ಧ ಮತ ಚಲಾಯಿಸಿದ ಕಾರಣ ಅಂತ್ಯಗೊಂಡಿತು. ಅದಾದ ನಂತರ ವಿಶ್ವಾಸ ಮತ ಗಳಿಸುವ ಯಾವುದೇ ಅವಕಾಶ ಇಲ್ಲ ಎಂದು ಗೊತ್ತಾದರೂ ಯಡಿಯೂರಪ್ಪ ಅವರು ವಿಶ್ವಾಸ ಮತವನ್ನು ಎದುರಿಸಿದರು. ಚರ್ಚೆಯ ನಂತರ, ವಿಶ್ವಾಸ ಮತ ಯಾಚನೆಗೂ ಮುಂಚೆಯೇ ರಾಜೀನಾಮೆ ನೀಡಿದರು.

೩೧ನೇ ಜುಲೈ ೨೦೧೧: ಮುಖ್ಯಮಂತ್ರಿಯಾಗಿ ಮೂರುವರೆ ವರ್ಷ

೨೦೧೧ರಲ್ಲಿ ಯಡಿಯೂರಪ್ಪ ಅವರು, ಕಾನೂನುಬಾಹಿರ  ಗಣಿಗಾರಿಕೆ ಪ್ರಕರಣದಲ್ಲಿ ಲೋಕಾಯುಕ್ತದ ಅಂದಿನ ನ್ಯಾಯಮೂರ್ತಿ ಸಂತೋಷ್ ಎನ್. ಹೆಗ್ಗಡೆ ಅವರಿಂದ ದೋಷಾರೋಪಣೆಗೆ ಎದುರಾಗಿ ಖುರ್ಚಿ ತೊರೆಯಬೇಕಾಯಿತು.

ವರದಿಯಲ್ಲಿ ಯಡಿಯೂರಪ್ಪ ಹಾಗೂ ಅವರ ಕೆಲವು ಸಂಪುಟ ಸಹೋದ್ಯೋಗಿಗಳು ಬಳ್ಳಾರಿ ಜಿಲ್ಲೆಯಲ್ಲಿ ಕಾನೂನುಬಾಹಿರ ಗಣಿಗಾರಿಕೆ ನಡೆಸಿ ಸರ್ಕಾರದ ಬೊಕ್ಕಸಕ್ಕೆ ರೂ.೧೬,೦೮೫ ಕೋಟಿಗಳ ನಷ್ಟ ಉಂಟು ಮಾಡುರುವುದಾಗಿ ತಿಳಿಸಲಾಗಿತ್ತು.

ಯಡಿಯೂರಪ್ಪ ಅವರ ಜೊತೆಗೆ ಬಳ್ಳಾರಿಯ ಗಣಿ ದೊರೆಗಳಾದ ಜಿ. ಜನಾರ್ಧನ್ ರೆಡ್ಡಿ, ಜಿ. ಕರುಣಾಕರ ರೆಡ್ಡಿ, ಅವರ ಸಹವರ್ತಿ ಬಿ. ಶ್ರೀರಾಮುಲು ಹಾಗೂ ವಿ. ಸೋಮಣ್ಣ ಅವರ ಹೆಸರುಗಳೂ ಸಹ ವರದಿಯಲ್ಲಿದ್ದವು. ಆಗ ಅವರೆಲ್ಲರೂ ಸಹ ಯಡಿಯೂರಪ್ಪ ಅವರ ಕ್ಯಾಬಿನೆಟ್‌ ನಲ್ಲಿ ಸಚಿವರಾಗಿದ್ದರು.

ಮಾಜಿ ಎಂ.ಪಿ. ಅನಿಲ್ ಲಾಡ್ ಹಾಗೂ ಹಾಲಿ ಬಿಜೆಪಿ ಸಚಿವ ಆನಂದ್ ಸಿಂಗ್ ಅವರ ಹೆಸರುಗಳೂ ಸಹ ವರದಿಯಲ್ಲಿತ್ತು. ಆ ವರದಿಯ ಪ್ರಕಾರ ಯಡಿಯೂರಪ್ಪ ಅವರ ಮಕ್ಕಳಾದ ಬಿ.ವೈ. ರಾಘವೇಂದ್ರ ಮತ್ತು ಬಿ.ವೈ.ವಿಜೇಂದ್ರ ಮತ್ತು ಅಳಿಯ ಆರ್.ಎನ್. ಸೋಹನ್ ಕುಮಾರ್ ಅವರುಗಳು ಲಂಚದ ರೂಪದಲ್ಲಿ ಗಣಿಗಾರಿಕೆ ಕಂಪನಿಗಳಿಂದ ದೊಡ್ಡ ಮೊತ್ತವನ್ನು ಪಡೆದಿರುವುದಾಗಿ ಆರೋಪಿಸಲಾಗಿತ್ತು.

ಆರಂಭದಲ್ಲಿ ಯಡಿಯೂರಪ್ಪ ಅವರು ವರದಿಯನ್ನು ಅಲ್ಲಗಳೆದು, ಮುಖ್ಯಮಂತ್ರಿ ಖುರ್ಚಿಯಿಂದ ಕೆಳಗಿಳಯಲು ನಿರಾಕರಿಸಿದರು. ಆದರೆ ಬಿಜೆಪಿ ಹೈಕಮಾಂಡ್‌ ಗೆ ಇವರನ್ನು ಮುಂದುವರೆಸಲು ಇಷ್ಟವಿರಲಿಲ್ಲ. ಆದರೆ, ಬಿಜೆಪಿಯ ಹಿರಿಯ ನಾಯಕಾದ ಎಲ್.ಕೆ. ಅಡ್ವಾಣಿ ಅವರು ಯರಿಯೂರಪ್ಪ ಅವರ ಕೆಲಸದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಆ ಕಾರಣದಿಂದಾಗಿ ಬೇರೆ ದಾರಿ ಇಲ್ಲದೆ ಯಡಿಯೂರಪ್ಪ ಅವರು ರಾಜೀನಾಮೆ ನೀಡಬೇಕಾಯಿತು.

ಆಗ ಬಿಜೆಪಿ ಹೈಕಮಾಂಡ್ ಮುಂದೆ ಯಡಿಯೂರಪ್ಪ ಅವರು ಮೂರು ಷರತ್ತುಗಳನ್ನು ಹಾಕಿದರು. ಅದೇನೆಂದರೆ, ಮೊದಲನೆಯದಾಗಿ ಮುಖ್ಯಮಂತ್ರಿ ಅಭ್ಯರ್ಥಿ ಇವರು ಹೇಳಿದವರೇ ಆಗಬೇಕು ಎನ್ನುವುದಾಗಿತ್ತು. ಆ ಪ್ರಕಾರವಾಗಿ ಆರ್‌ಎಸ್‌ಎಸ್ ಮೂಲದ ಡಿ.ವಿ. ಸದಾನಂದ ಗೌಡ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು.

ಅವರ ಎರಡನೆ ಷರತ್ತು, ಸಚಿವ ಸಂಪುಟ ರಚನೆಯಲ್ಲಿ ಪ್ರಮುಖ ಪಾತ್ರ ಅವರಿಗೆ ನೀಡಬೇಕೆಂಬುದಾಗಿತ್ತು. ಹಾಗೂ ಅವರನ್ನು ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎನ್ನುವುದಾಗಿತ್ತು.

೧೯ ಮೇ, ೨೦೧೮: ಮುಖ್ಯಮಂತ್ರಿಯಾಗಿ ಎರಡೂವರೆ ದಿನ

ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದು ಅನಿರ್ಧಿಷ್ಟ ಅಸೆಂಬ್ಲಿ ನಿರ್ಮಾಣವಾಯಿತು. ಆಗ ಬಿಜೆಪಿ ೧೦೪ ಎಂಎಲ್‌ಎಗಳೊಂದಿಗೆ ಅತೀ ದೊಡ್ಡ ಬಹುಮತ ಇರುವ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್ ೭೮ ಸೀಟುಗಳನ್ನು ಗೆದ್ದರೆ, ಜೆಡಿಎಸ್ ೩೮ ಸೀಟುಗಳನ್ನು (ಬಹುಜನ ಸಮಾಜ ಪಾರ್ಟಿಯ ಒಂದು ಸೀಟು) ಗೆದ್ದಿತ್ತು. ಎರಡು ವಿಧಾಸಭಾ ಕ್ಷೇತ್ರಗಳ ಮತದಾನವನ್ನು ತಡೆಹಿಡಿಯಲಾಗಿತ್ತು.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡು ಕರ್ನಾಟಕದ ರಾಜ್ಯಪಾಲರಾಧ ವಜೂಬಾಯಿ ರೂಢಾಬಾಯಿ ವಾಲಾ ಅವರಿಗೆ ಮನವಿ ಸಲ್ಲಿಸಿದ್ದವು. ಆದರೆ ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಸರ್ಕಾರವನ್ನು ರಚಿಸಲು ಮೊದಲು ಆಹ್ವಾನಿಸಿ ನೀಡಿ ವಿಶ್ವಾಸಮತವನ್ನು ಸಾಬೀತುಪಡಿಸಲು ೧೫ ದಿನಗಳ ಕಾಲಾವಕಾಶವನ್ನು ನೀಡಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು, ರಾಜ್ಯಪಾಲ ವಜೂಬಾಯಿ ರೂಢಾಬಾಯಿ ವಾಲ ಅವರ ಸವಾಲಿನ ವಿರುದ್ಧ ಉಚ್ಛ ನ್ಯಾಯಾಲಯದ ಮೊರೆ ಹೋದರು. ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸಲು ಒಂದು ವಾರದ ಕಾಲಾವಕಾಶ ಕೇಳಿದ್ದರು. ಆದರೆ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಯಡಿಯೂರಪ್ಪ ಅವರಿಗೆ ಬಹುಮತವನ್ನು ಸಾಬೀತುಪಡಿಸಲು ಕೇವಲ ಒಂದು ದಿನದ ಕಾಲಾವಕಾಶ ನೀಡಿತು.

ಆದರೆ, ೧೯ ಮೇ ೨೦೧೮ರಂದು ಯಡಿಯೂರಪ್ಪ ಅವರು ಬಹುಮತವನ್ನು ಸಾಬೀತುಪಡಿಸುವುದು ಕಡ್ಡಾಯ ಎಂದ ಸರ್ವೋಚ್ಛ ನ್ಯಾಯಾಲಯದ ಪ್ರಕಾರ ವಿಶ್ವಾಸಮತವನ್ನು ಸಾಬೀತುಪಡಿಸದೇ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದರು. ಆಗ ಅವರು ಮುಖ್ಯಮಂತ್ರಿಯಾಗಿ ಕೇವಲ ಎರಡೂವರೆ ದಿನಗಳು ಮಾತ್ರ ಪೂರ್ಣಗೊಳಿಸಿದ್ದರು.

೨೦೧೮ರಲ್ಲಿ ರಾಜೀನಾಮೆ ನೀಡಿದ್ದು, ಸರಳ ಬಹುಮತಕ್ಕೆ ಅಗತ್ಯವಿದ್ದಂತಹ ೧೧೨ ಸೀಟುಗಳ ಪ್ರಕಾರ ೮ ಶಾಸಕರನ್ನು ಸುಲಭವಾಗಿ ಸೆಳೆದುಕೊಳ್ಳಬಹುದು ಎಂದು ತಿಳಿದಿದ್ದಂತಹ ಬಿಜೆಪಿಯ ಕೇಂದ್ರದ ನಾಯಕರಿಗೆ ಅತ್ಯಂತ ಮುಜುಗುರ ಉಂಟು ಮಾಡಿದ ಸನ್ನಿವೇಶವಾಯಿತು.

ಬಿಜೆಪಿ, ತಮ್ಮ ಪಕ್ಷದ ಎಂಎಲ್‌ ಎಗಳನ್ನು ದೊಡ್ಡ ಪ್ರಮಾಣದ ಹಣ ಹಾಗೂ ಸಚಿವರನ್ನಾಗಿ ಮಾಡುವ ಆಶ್ವಾಸನೆಯನ್ನು ಕೊಟ್ಟು ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಆರೋಪಿಸಿದವು. ಆಗ ಯಡಿಯೂರಪ್ಪ ಅವರು ಕೆಲವು ಶಾಸಕರನ್ನು ಸಂಪರ್ಕಿಸಿರುವುದಾಗಿಯೂ ಮತ್ತು ‘ಆಶ್ವಾಸನೆ’ಗಳನ್ನು ನೀಡಿರುವುದಾಗಿಯೂ ಒಪ್ಪಿಕೊಂಡರು. ಆದರೆ ಅದು ಪ್ರತಿಪಕ್ಷಗಳು ಆರೋಪಿಸಿದಂತೆ ಆಶ್ವಾಸನೆಗಳಲ್ಲ ಬದಲಿಗೆ ‘ಮನವಿ’ ಎಂದು ತಿಳಿಸಿದರು.

೨೬ನೇ ಜುಲೈ ೨೦೨೧: ಮುಖ್ಯಮಂತ್ರಿಯಾಗಿ ಎರಡು ವರ್ಷ

೨೦೧೮ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಕರ್ನಾಟಕ ಒಂದು ರೀತಿಯ ಗೊಂದಲದ ಫಲಿತಾಂಶವನ್ನು ನೀಡಿತು. ಬಿಜೆಪಿ ೧೦೪ ಸೀಟುಗಳನ್ನು ಗೆದ್ದರೆ, ಕಾಂಗ್ರೆಸ್ ೮೦ ಮತ್ತು ಜೆಡಿಎಸ್ ೩೬ ಸೀಟುಗಳನ್ನು ಗೆದ್ದಿತು.

ಬಿಜೆಪಿಗೆ ಬಹುಮತವನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ, ಇದರ ಫಲಿತಾಂಶವಾಗಿ ಕಾಂಗ್ರೆಸ್-ಜೆಡಿಎಸ್ ಅಧಿಕಾರ ಹಿಡಿದು ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು.

ಒಂದು ವರ್ಷದ ನಂತರ ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಆರೋಪಿಸಿದಂತೆ ಎರಡೂ ಪಕ್ಷಗಳಿಂದ ಒಟ್ಟು ೧೭ ಎಂಎಲ್‌ಎಗಳನ್ನು ಸೆಳೆದುಕೊಂಡು ಯಡಿಯೂರಪ್ಪ ಅವರ ನೇತೃತ್ವದಡಿ ಸರ್ಕಾರ ರಚಿಸಿತು.

ಸರ್ಕಾರ ರಚನೆಯ ಕೇವಲ ಒಂದು ವರ್ಷದಲ್ಲಿ ಯಡಿಯೂರಪ್ಪ ಅವರು ಸ್ವಪಕ್ಷೀಯರಿಂದಲೇ ವಿರೋಧವನ್ನು ಎದುರಿಸಲಾರಂಭಿಸದರು.

ಅರವಿಂದ್ ಬೆಲ್ಲದ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಒಳಗೊಂಡಂತೆ ಬಿಜೆಪಿ ಎಂಎಲ್‌ಎಗಳು ಯಡಿಯೂರಪ್ಪ ಅವರ ವಿರುದ್ಧ ಹೇಳಿಕೆಗಳನ್ನು ನೀಡಿದರು. ಅಸಮರ್ಪಕ ನಿರ್ವಹಣೆಯ ಆರೋಪದ ಜೊತೆಗೆ ಕೋವಿಡ್ ಬಿಕ್ಕಟ್ಟು ಎದುರಾಯಿತು. ಯಡಿಯೂರಪ್ಪ ಅವರ ಮಗ ವಿ.ವೈ. ವಿಜಯೇಂದ್ರ ತೆರೆಯ ಮರೆಯಲ್ಲಿ ಸರ್ಕಾರ ನಡೆಸುತ್ತಿರುವ ಕುರಿತು ವ್ಯಾಪಕ ಆರೋಪಗಳು ಕೇಳಿ ಬಂದಿತು. ಜೂನ್ ೨೦೨೧ರ ವೇಳೇಗೆ ಬಿಜೆಪಿ ಹೈಕಮಾಂಡ್ ಪರ್ಯಾಯ ನಾಯಕನ ಹುಡುಕಾಟವನ್ನು ಆರಂಭಿಸಿತು.

೩೦ ದಿನಗಳ ಊಹಾಪೋಗಳು ಮತ್ತು ನಿರಾಕರಣೆಯ ನಂತರ ಯಡಿಯೂರಪ್ಪನವರು, ತಮ್ಮ ಆಡಳಿತದ ಎರಡು ವರ್ಷಗಳನ್ನು ಪೂರ್ಣಗೊಳಿಸಿದ ದಿನದಂದೇ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರತಿ ಬಾರಿಯೂ ತಾವು ಮುಖ್ಯಮಂತ್ರಿಯಾದಾಗ ಅವರು ಎದುರಿಸಿದಂತಹ ಅನೇಕ ಸವಾಲುಗಳು ಹಾಗೂ ತೊಂದರೆಗಳ ಹೊರತಾಗಿಯೂ ಪಕ್ಷದ ಕೇಂದ್ರದ ನಾಯಕರಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಸುದ್ದಿ ಮೂಲ: ದಿ ಕ್ವಿಂಟ್

Key words: Resigned -four times- B.S yeddyurappa- can’t-complete – full term – chief minister