ರವೀಂದ್ರನಾಥ್ ರಾಜೀನಾಮೆ ಹಿಂದೆ ನನ್ನ ಕೈವಾಡ ಇಲ್ಲ- ಶಾಸಕ ಎಂ.ಪಿ ರೇಣುಕಾಚಾರ್ಯ ಸ್ಪಷ್ಟನೆ.

ದಾವಣಗೆರೆ,ಮೇ,12,2022(www.justkannada.in):  ಐಪಿಎಸ್ ಹುದ್ದೆಗೆ  ರವೀಂದ್ರನಾಥ್ ರಾಜೀನಾಮೆ ವಿಚಾರ ಸಂಬಂಧ ಇದರಲ್ಲಿ ನನ್ನ ಕೈವಾಡ ಇಲ್ಲ ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ದಾವಣಗೆರೆ ಹೊನ್ನಾಳಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಎಂ.ಪಿ ರೇಣುಕಾಚಾರ್ಯ, ನಾನು ಯಾವುದೇ ನಕಲಿ ಜಾತಿ ಪ್ರಮಾಣ ಪತ್ರ ಪಡೆದಿಲ್ಲ. ಡಿಕೆ ಶಿವಕುಮಾರ್ ನನ್ನ ಮೇಲೆ ಆರೋಪ ಮಾಡುತ್ತಾರೆ.  ರವೀಂದ್ರನಾಥ್ ರಾಜೀನಾಮೆಗೂ ನನಗೂ ಯಾವುದೇ ಸಂಬಂಧವಿಲ್ಲ  ಸುಳ್ಳು ಹೇಳಿದ್ದರೇ ಸಿಎಂ ಆಗಬಹುದು ಎಂಬ ಭ್ರಮೆಯಲ್ಲಿ ಡಿ.ಕೆ ಶಿವಕುಮಾರ್ ಇದ್ದಾರೆ ಎಂದು ಟಾಂಗ್ ನೀಡಿದರು.

ಶಾಸಕ ಎಂಪಿ ರೇಣುಕಾಚಾರ್ಯ ವಿರುದ್ಧ ತಮ್ಮ ಪುತ್ರಿಗೆ ನಕಲಿ ಜಾತಿ ಪ್ರಮಾಣ ಪತ್ರ ಮಾಡಿಸಿಕೊಂಡಿರುವ ಆರೋಪ ಕೇಳಿ ಬಂದಿತ್ತು.  ಈ ನಡುವೆ ರವೀಂದ್ರನಾಥ್ ಅವರನ್ನ ವರ್ಗಾವಣೆ ಮಾಡಲಾಗಿತ್ತು. ನಂತರ ಐಪಿಎಸ್ ಹುದ್ದೆಗೆ ರವೀಂದ್ರನಾಥ್ ರಾಜೀನಾಮೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯ, ರವೀಂದ್ರನಾಥ್ ಪ್ರಭಾವಿ ವ್ಯಕ್ತಿಗಳ ಮೇಲೆ ತನಿಖೆ ಮಾಡಿದ್ದು ಹೀಗಾಗಿ ಸರ್ಕಾರ ವರ್ಗಾವಣೆ ಮಾಡಿದೆ ಎಂಬ ಮಾಹಿತಿ ಇದೆ. ಇದನ್ನ ಸ್ವತಃ ರವೀಂದ್ರನಾಥ್ ಅವರೇ ಹೇಳಿದ್ದಾರೆ ಎಂದಿದ್ದರು.

Key words: resignation –IPS-officer- Rabindranath-MLA-MP Renukacharya