ಸಿಎಂ ರಾಜೀನಾಮೆ ನೀಡಿ: ಇಲ್ಲದಿದ್ದರೇ ಮಸೂದೆ ಹಿಂಪಡೆಯಿರಿ- ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ…

Promotion

ಬೆಂಗಳೂರು,ಡಿಸೆಂಬರ್,9,2020(www.justkannada.in):  ಭೂ ಸುಧಾರಣಾ ಕಾಯ್ದೆ ಅಂಗೀಕಾರವಾದ ಹಿನ್ನೆಲೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದು ಈ ನಡುವೆ ಸಿಎಂ ಬಿಎಸ್ ವೈ ರಾಜೀನಾಮೆಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.logo-justkannada-mysore

ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ಇಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರ ಶೇಖರ್ ನೇತೃತ್ವದಲ್ಲಿ ರೈತರು ಬಾರುಕೋಲು ಚಳುವಳಿ ನಡೆಸಿದರು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ರೈತರನ್ನ ಪೊಲೀಸರು ತಡೆದರು. ನಂತರ ಫ್ರೀಡಂಪಾರ್ಕ್ ನಲ್ಲಿ ರೈತರು ಧರಣಿ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ನಾವು ಹೋರಾಟ ಮಾಡುತ್ತಿರುವಾಗಲೇ ಕಾಯ್ದೆ ಅಂಗೀಕಾರ ಮಾಡಿದ್ದೀರಿ. ಸಿಎಂ ರಾಜೀನಾಮೆ ನೀಡಿ ಇಲ್ಲದಿದ್ದರೇ ಮಸೂದೆ ಹಿಂಡೆಯಿರಿ ಎಂದು ಆಗ್ರಹಿಸಿದರು.resign-cm-withdraw-bill-farmer-leader-kodihalli-chandrasekhar

ಇದೇ ವೇಳೆ ಕೃಷಿ ಸಚವ ಬಿ.ಸಿ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ ಕೋಡಿಹಳ್ಳಿ ಚಂದ್ರಶೇಖರ್, ಬಿ.ಸಿ ಪಾಟೀಲ್ ಗೆ ರಾಜಕೀಯ ಗೊತ್ತಿಲ್ಲ. ಯಾವಪಕ್ಷದಿಂದ ಗೆದ್ದ. ಯಾವ ಪಕ್ಷಕ್ಕೆ ಹೋದ. ಯಾವ ಪಕ್ಷದಲ್ಲಿ ಮಂತ್ರಿಯಾಗಿದ್ದಾನೆ. ನಿನಗೆ ರೈತರ ಪರವಾಗಿ ಮಾತನಾಡುವ ನೈತಿಕತೆ ಇಲ್ಲ ಎಂದು ಏಕವಚನದಲ್ಲೇ ಕಿಡಿಕಾರಿದರು.

Key words:  Resign- CM-withdraw – bill-farmer leader-Kodihalli Chandrasekhar