“ಮೀಸಲಾತಿ ಹೋರಾಟಗಳ ಹಿಂದೆ ಆರ್.ಎಸ್.ಎಸ್ ಕೈವಾಡ” : ಮಾಜಿ ಸಿಎಂ ಸಿದ್ದರಾಮಯ್ಯ

kannada t-shirts

ಮೈಸೂರು,ಮಾರ್ಚ್,18,2021(www.justkannada.in) : ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟಗಳ ಹಿಂದೆ ಆರ್.ಎಸ್.ಎಸ್ ಕೈವಾಡ ಇದೆ. ಬಿಜೆಪಿ ಮತ್ತು ಆರ್.ಎಸ್.ಎಸ್ ರಾಜ್ಯದ ಮಿಲ್ಲರ್ ಆಯೋಗದಿಂದ ಚಿನ್ನಪ್ಪರೆಡ್ಡಿ ಆಯೋಗದ ವರೆಗೆ ಹಾಗೂ ಕೇಂದ್ರದ ಮಂಡಲ್ ಆಯೋಗದ ವರದಿಯನ್ನು ವಿರೋಧಿಸಿರುವುದು ಇತಿಹಾಸದ ಭಾಗವಾಗಿದೆ. ಇದನ್ನು ಹಿಂದುಳಿದ ಜಾತಿಗಳು ಅರ್ಥಮಾಡಿಕೊಳ್ಳಬೇಕು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.jk

ಸರ್ಕಾರದ  ಜನವಿರೋಧಿ ನಿಲುವಿನ ವಿರುದ್ಧ ಪ್ರತಿಭಟನೆ ಅಗತ್ಯ

ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯದ ಬಿಜೆಪಿ ಸರ್ಕಾರ ದುರುದ್ದೇಶವಿಟ್ಟುಕೊಂಡು ಹಿಂದುಳಿದ ಜಾತಿ, ದಲಿತರು ಮತ್ತು ಅಲ್ಪಸಂಖ್ಯಾತರನ್ನು ತುಳಿಯುತ್ತಿರುವುದು ಸ್ಪಷ್ಟವಾಗಿದೆ. ಸರ್ಕಾರದ ಈ ಜನವಿರೋಧಿ ನಿಲುವಿನ ವಿರುದ್ಧ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಪ್ರತಿಭಟನೆ ನಡೆಯಬೇಕು. ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಆರೋಪಿಸಿದ್ದಾರೆ.

ಹಿಂದುಳಿದ ಜಾತಿಗಳಿಗೆ ಲೋಕಸಭೆ ಮತ್ತು ವಿಧಾನಸಭೆಗಳಿಗೆ ವಿಸ್ತರಿಸಬೇಕು

ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲ ರಾಜಕೀಯ ಕ್ಷೇತ್ರದಲ್ಲಿಯೂ ಹಿಂದುಳಿದ ಜಾತಿಗಳು ಮೀಸಲಾತಿ ಕೇಳುವ ಕಾಲ ಬಂದಿದೆ. ಹಿಂದುಳಿದ ಜಾತಿಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಇರುವ ರಾಜಕೀಯ ಮೀಸಲಾತಿಯನ್ನು ಲೋಕಸಭೆ ಮತ್ತು ವಿಧಾನಸಭೆಗಳಿಗೆ ಕೂಡಾ ವಿಸ್ತರಿಸಬೇಕಾಗುತ್ತದೆ ಎಂದರು.

Reservation-Battles-past-Cellphone-Showroom-Handwash-Former CM-Siddaramaiah

ಪ್ರತಿಯೊಂದು ಕ್ಷೇತ್ರದಲ್ಲಿಯೂ ಅವಶ್ಯಕ ಪ್ರಮಾಣದ ಪ್ರಾತಿನಿಧ್ಯ ನೀಡಬೇಕು

ಪ್ರತಿಯೊಂದು ಸಮುದಾಯಕ್ಕೂ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅವಶ್ಯಕ ಪ್ರಮಾಣದ ಪ್ರಾತಿನಿಧ್ಯ ನೀಡಬೇಕೆಂಬುದೇ ಸಂವಿಧಾನದ ಆಶಯವಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸಹಕಾರಿ ಕ್ಷೇತ್ರದಲ್ಲಿಯೂ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಿದ್ದೆ. ಸಾಮಾಜಿಕ ನ್ಯಾಯದ ಈ ರಥ ಮುಂದಕ್ಕೆ ಹೋಗಬೇಕಾಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯದ ಬಿಜೆಪಿ ಸರ್ಕಾರದಿಂದ ಶೋಷಿತ ಸಮುದಾಯಗಳಿಗೆ ಘೋರ ಅನ್ಯಾಯ

ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿರುವ ಹದಿನೆಂಟು ನಿಗಮಗಳಿಗೆ ಕೇವಲ ರೂ.500 ಕೋಟಿ ನೀಡುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ಶೋಷಿತ ಸಮುದಾಯಗಳಿಗೆ ಘೋರ ಅನ್ಯಾಯ ಎಸಗಿದೆ. ಅನ್ಯಾಯಕ್ಕೀಡಾಗಿರುವ ಈ ಸಮುದಾಯಗಳು ಬೀದಿಗಿಳಿಯದೆ ನ್ಯಾಯ ಸಿಗಲಾರದು ಎಂದು ಸಲಹೆ ನೀಡಿದ್ದಾರೆ.

ವಿದ್ಯಾರ್ಥಿವೇತನಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ

ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗಾಗಿ ನಮ್ಮ ಸರ್ಕಾರ ಜಾರಿಗೆ ತಂದಿದ್ದ ವಿದ್ಯಾಸಿರಿ ಯೋಜನೆಯನ್ನು ನಿಲ್ಲಿಸಲಾಗಿದೆ. ಹಿಂದುಳಿದ ಜಾತಿಗಳ ಹಾಸ್ಟೆಲ್ ಗಳನ್ನು ನಿರ್ಲಕ್ಷಿಸಲಾಗುತ್ತಿದೆ. ವಿದ್ಯಾರ್ಥಿವೇತನಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ. ರಾಜ್ಯ ಸರ್ಕಾರ ದುರುದ್ದೇಶವಿಟ್ಟುಕೊಂಡೇ ಹಿಂದುಳಿದ ಜಾತಿಗಳನ್ನು ತುಳಿಯುತ್ತಿದೆ ಎಂದು ಕಿಡಿಕಾರಿದ್ದಾರೆ.Reservation-Battles-past-Cellphone-Showroom-Handwash-Former CM-Siddaramaiah

ಕುರುಬ ಮೀಸಲಾತಿ ಬೇಡಿಕೆ, ನಾನು ವಿರೋಧಿಸಿಲ್ಲ 

ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕುರುಬರು ಸಮಾವೇಶ ನಡೆಸಿದರು. ನಾನೇನು ಈ ಬೇಡಿಕೆಯನ್ನು ವಿರೋಧಿಸಿಲ್ಲ. ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಂಡ ನಂತರ ಸರ್ಕಾರ ನಿರ್ಧಾರ ಕೈಗೊಳ್ಳಲು ಸಾಧ್ಯ. ಹೀಗಿದ್ದರೂ, ನನ್ನನ್ನು ಗುರಿಯಾಗಿಸಿಕೊಂಡು ಆರ್ ಎಸ್ ಎಸ್ ಕುಮ್ಮಕ್ಕಿನಿಂದ ಹೋರಾಟ ನಡೆಯಿತು. ಈಗ ಯಾಕೆ ಸುಮ್ಮನಾಗಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ENGLISH SUMMARY…..

Siddaramaiah alleges RSS hand behind reservation fight
Mysuru, Mar. 18, 2021 (www.justkannada.in): Former Chief Minister Siddaramaiah today expressed his suspicion of RSS hands behind the reservation fights that are taking place in the state. “Whereas everyone knows the history of BJP and RSS have opposed all the Commission reports starting from Millers Commission to Chinnappareddy and Govt. of India’s Mandal Commission. Backward Caste people should understand this,” he said.
In his tweet, he has alleged that the BJP government in the state has vested interests against the backward castes, Dalits and minorities, and hence it has made some plans. Protests should be held against this anti-people stand of the State Government, at the district and taluk levels. I will support those protests completely.
“A time has been created where the backward castes have to demand reservations even in the political sector along with jobs and education. The political reservation that is now available for the backward castes in local institutions may have to be extended for parliament too,” he added.
Keywords: Former Chief Minister Siddaramaiah/ reservation fight/ RSS-BJP hand

key words : Reservation-Battles-past-Cellphone-Showroom-Handwash-Former CM-Siddaramaiah

website developers in mysore