ಅರಣ್ಯ ಸಚಿವ ಸತೀಶ್ ಜಾರಕಿಹೊಳಿಗೆ ಪಶ್ಚಿಮಘಟ್ಟ ಅರಣ್ಯ ಸಂರಕ್ಷಣಾ ಕಾರ್ಯಪಡೆಯಿಂದ ವರದಿ ಸಲ್ಲಿಕೆ‌…

Promotion

ಬೆಂಗಳೂರು,ಜು,3,2019(www.justkannada.in): ಪಶ್ಚಿಮಘಟ್ಟ ಅರಣ್ಯ ಸಂರಕ್ಷಣಾ ಕಾರ್ಯಪಡೆಯಿಂದ ಅರಣ್ಯ ಸಚಿವ ಸತೀಶ್ ಜಾರಕಿಹೊಳಿಯವರಿಗೆ ವರದಿ ಸಲ್ಲಿಸಲಾಯಿತು.

ಪಶ್ಚಿಮಘಟ್ಟ ಅರಣ್ಯ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಚಂದ್ರಶೇಖರ್  ಅವರು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ವರದಿ ಸಲ್ಲಿಸಿದರು. ವರದಿ ಸಲ್ಲಿಸಿದ ಬಳಿಕ ಮಾತನಾಡಿದ ಚಂದ್ರಶೇಖರ್. ಇಂದು ಅಂತಿಮ ವರದಿ ಸಲ್ಲಿಸಿದ್ದೇನೆ. ಪಶ್ಚಿಮ ಘಟ್ಟ ಪ್ರದೇಶಕ್ಕೆ ಹೈ .ಕ.ಮಾದರಿಯಲ್ಲಿ  ವಿಶೇಷ ಸ್ಥಾನ ಮಾನ ನೀಡಿ‌ ಅಭಿವೃದ್ದಿ ಮಾಡಬೇಕು. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹಿಟಾಚಿಯಂತಾ ಬೃಹತ್ ಯಂತ್ರಗಳ ಬಳಕೆ ನಿಷೇಧ‌ಹೇರಬೇಕು. ಎತ್ತಿನಹೊಳೆ ಯೋಜನೆ ಪೂರ್ಣವಾದ ಬಳಿಕ ಅಂತಹ ಮತ್ತೊಂದು ಬೃಹತ್ ಯೋಜನೆ ಹಮ್ಮಿಕೊಳ್ಳುವುದು ಸೂಕ್ತವಲ್ಲ ಎಂಬುದು ಸೇರಿದಂತೆ 33 ಶಿಫಾರಸ್ಸುಗಳನ್ನು ಮಾಡಿದ್ದೇವೆ‌. ಹಿಂದೆ ಗುರುತಿಸಲಾಗಿದ್ದ ಬಫರ್ ಜೋನ್ ವ್ಯಾಪ್ತಿಯನ್ನೇ ಮುಂದುವರಿಸಲು ಶಿಫಾರಸ್ಸು ಮಾಡಲಾಗಿದೆ ಎಂದರು.

ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಕಸ್ತೂರಿ ರಂಗನ್ ವರದಿಯ ಶಿಫಾರಸ್ಸುಗಳನ್ನು ಪೂರ್ಣ ಪ್ರಮಾಣದಲ್ಲಿ ಒಪ್ಪಲು ಸಾಧ್ಯವಿಲ್ಲ‌. ಹಾಗಾಗಿ ಕೆಲವು ಮಾರ್ಪಾಡುಗಳನ್ನು ಮಾಡಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಕೇಂದ್ರದ ಅಧಿಸೂಚನೆಗೆ ಕಾಯುತ್ತಿದ್ದೇವೆ. ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ವರದಿ ಈಗಷ್ಟೇ ಕೈ ಸೇರಿದೆ‌. ಅದನ್ನು ಪರಿಶೀಲಿಸಿದ ಬಳಿಕವಷ್ಟೇ ಅದರಲ್ಲಿನ ಶಿಫಾರಸ್ಸುಗಳ ಜಾರಿಗೆ ಮುಂದಾಗಬಹುದು ಎಂದರು.

key words: Report – Forest- Protection -Task Force – Minister – Satish jarakiholi