ಖ್ಯಾತ ಕೂಚುಪುಡಿ ನೃತ್ಯ ಕಲಾವಿದೆ ಶೋಭಾ ನಾಯ್ಡು ನಿಧನ

Promotion

ಬೆಂಗಳೂರು,ಅಕ್ಟೋಬರ್,14,2020(www.justkannada.in) : ಖ್ಯಾತ ಕೂಚುಪುಡಿ ನೃತ್ಯ ಕಲಾವಿದೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶೋಭಾ ನಾಯ್ಡು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

jk-logo-justkannada-logoಕಳೆದ ಕೆಲವು ದಿನಗಳಿಂದ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮುಂಜಾನೆ ಮೃತಪಟ್ಟಿದ್ದಾರೆ.

ಶೋಭಾ ನಾಯ್ಡು ಭಾರತದ ಅಗ್ರಗಣ್ಯ ಕೂಚುಪುಡಿ ನೃತ್ಯ ಕಲಾವಿದೆಯರಲ್ಲಿ ಒಬ್ಬರು. ಪ್ರಖ್ಯಾತ ವೇಂಪತಿ ಚಿನ್ನ ಸತ್ಯಂ ಅವರ ಅತ್ಯುತ್ತಮ ಶಿಷ್ಯರಲ್ಲಿ ಒಬ್ಬರು. ಕೂಚುಪುಡಿ ತಂತ್ರವನ್ನು ಕರಗತ ಮಾಡಿಕೊಂಡಿದ್ದ ಚಿಕ್ಕ ವಯಸ್ಸಿನಲ್ಲಿಯೇ ನೃತ್ಯ-ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿದ್ದ ಕಲಾವಿದೆಯಾಗಿದ್ದರು.

Renowned-Kuchupudi-dancer-Shobha Naidu-passed-away

ದೇಶಾದ್ಯಂತ ಮತ್ತು ವಿದೇಶಗಳಲ್ಲಿ ತಮ್ಮ ತಂಡದೊಂದಿಗೆ ಪ್ರದರ್ಶನ ನೀಡಿದ್ದ ಶೋಭಾ ನಾಯ್ಡು ಸತ್ಯಭಾಮ ಮತ್ತು ಪದ್ಮಾವತಿ ಪಾತ್ರಗಳಲ್ಲಿ ಉತ್ತಮ ಅಭಿನಯ ನೀಡಿದ್ದರು. ಅತ್ಯುತ್ತಮ ಏಕವ್ಯಕ್ತಿ ನರ್ತಕಿ ಕೂಡ ಆಗಿದ್ದ ಶೋಭಾ ನಾಯ್ಡು ಹಲವಾರು ನೃತ್ಯ-ನಾಟಕಗಳನ್ನು, ನೃತ್ಯ ಸಂಯೋಜನೆಯನ್ನೂ ಮಾಡಿದ್ದರು.

ಶೋಭಾ ನಾಯ್ಡು 1956 ರಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಅನಕಪಲ್ಲಿಯಲ್ಲಿ ಜನಿಸಿದ್ದರು. ಕ್ವೀನ್ ಮೇರಿಸ್ ಕಾಲೇಜಿನಿಂದ ಪದವಿ ಗಳಿಸಿದ್ದ ಶೋಭಾ ಕೌಟುಂಬಿಕ ವಿರೋಧಗಳ ಹೊರತಾಗಿಯೂ ಅವರು ವೇಂಪತಿಯವರಲ್ಲಿ ಕೂಚುಪುಡಿ ತರಬೇತಿ ಪಡೆದಿದ್ದರು. ಅವರು 80 ಏಕವ್ಯಕ್ತಿ ಪ್ರದರ್ಶನ ನೀಡಿದ್ದಲ್ಲದೆ 15 ಬ್ಯಾಲೆಗಳಿಗೆ ನೃತ್ಯ ಸಂಯೋಜನೆ ಮಾಡಿರುವುದು ವಿಶೇಷವಾಗಿದೆ.Renowned-Kuchupudi-dancer-Shobha Naidu-passed-away

ಕಲಾಸೇವೆಗೆ ದೊರೆತ ಪ್ರಶಸ್ತಿಗಳ ವಿವರ

1991 ರಲ್ಲಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2001 ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಗೌರವ, ಮದ್ರಾಸ್‌ನ ಶ್ರೀ ಕೃಷ್ಣ ಗಣ ಸಭೆಯಿಂದ ‘ನೃತ್ಯ ಚೂಡಾಮಣಿ ‘ ಪ್ರಶಸ್ತಿ ಸಂದಿದೆ. ಹೈದರಾಬಾದ್‌ನ 40 ವರ್ಷಪರಂಪರೆ ಇರುವ ಕೂಚುಪುಡಿ ಆರ್ಟ್ ಅಕಾಡೆಮಿಗೆ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಭಾರತ ಮತ್ತು ವಿದೇಶಗಳ 1,500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.

key words : Renowned-Kuchupudi-dancer-Shobha Naidu-passed-away