ಖ್ಯಾತ ಕಿರುತೆರೆ ನಟ ಆತ್ಮಹತ್ಯೆಗೆ ಶರಣು

Promotion

ಮುಂಬೈ, 06, 2020 (www.justkannada.in): ಕಿರುತೆರೆಯ ಖ್ಯಾತ ನಟ ಸಮೀರ್ ಶರ್ಮಾ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಮೀರ್ ಶರ್ಮಾ ಮುಂಬೈನ ಪಶ್ಚಿಮ ಮಲಾಡ್‍ನ ರಸ್ತೆಯಲ್ಲಿರುವ ನೇಹಾ ಸಿಹೆಚ್‍ಎಸ್ ಬಿಲ್ಡಿಂಗ್‍ನ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು.

ಬುಧವಾರ ರಾತ್ರಿ ಫ್ಲ್ಯಾಟ್‍ನ ಅಡುಗೆ ಮನೆಯಲ್ಲಿ ನೇಣು ಬಿಗಿದ ಸೀತಿಯಲ್ಲಿ ಪತ್ತೆಯಾಗಿದ್ದಾರೆ.

ರಾತ್ರಿ ಭದ್ರತೆ ಪರಿಶೀಲಿಸುವ ವೇಳೆ ಫ್ಯಾನಿಗೆ ನೇಣುಬಿಗಿದುಕೊಂಡಿದ್ದ ಮೃತ ದೇಹವನ್ನು ಕಿಟಕಿಯಿಂದ ಕಂಡ ವಾಚ್ಮ್ಯಾನ್ ಕೂಡಲೇ ಬ್ಯುಲ್ಡಿಂಗ್ ಸೂಪರ್ವೈಸರ್ಗೆ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ಎರಡು ದಿನಗಳ ಹಿಂದೆಯೇ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಿದ್ದಾರೆ.