ಮೈಸೂರು ರೈಲ್ವೆ ನಿಲ್ದಾಣದಲ್ಲಿ ನವೀಕರಣ ಕಾರ್ಯ ಹಿನ್ನೆಲೆ: ಕೆಲ ರೈಲುಗಳ ಸಂಚಾರ ರದ್ದು..

ಮೈಸೂರು,ಜೂ,17,2019(www.justkannada.in): ಮೈಸೂರು ರೈಲ್ವೇ ನಿಲ್ದಾಣದ ಪ್ರಾಂಗಣದಲ್ಲಿ  ನವೀಕರಣದ  ಕೆಲಸ ನಡೆಯುತ್ತಿದ್ದು ಈ ಹಿನ್ನೆಲೆ ಮೈಸೂರಿನಿಂದ ಕೆಲ ರೈಲುಗಳ ಸಂಚಾರವನ್ನ ರದ್ದು ಮಾಡಲಾಗಿದೆ.

ಮೈಸೂರು ರೈಲ್ವೇ ನಿಲ್ದಾಣದ ಪ್ರಾಂಗಣದಲ್ಲಿ  ನವೀಕರಣದ  ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು, ಕೆಳಗಿನ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಈ ನವೀಕರಣ ಕೆಲಸವು  ಹಗಲಿನ ಸಮಯದಲ್ಲಿ ಭಾರೀ ಯಂತ್ರೋಪಕರಣಗಳನ್ನು ಬಳಸಿಕೊಂಡು ಮಾಡುವಂತಹದಾದ್ದರಿಂದ  ಮತ್ತು ಕೆಲವು ನಿರ್ಣಾಯಕ ಹಂತಗಳಲ್ಲಿ ಸಿಗ್ನಲ್ ಗಳನ್ನು ಹಸ್ತಚಾಲಿತವಾಗಿ ಹಲವು ಹಂತಗಳಲ್ಲಿ  ನಿರ್ವಹಿಸಬೇಕಾಗುತ್ತದೆ. ಸಧ್ಯಕ್ಕೆ ಮಧ್ಯರಾತ್ರಿಯಿಂದ ಮುಂಜಾನೆ  7 ಗಂಟೆಗಳವರೆಗೆ ದೂರ ಪ್ರಯಾಣದ ರೈಲುಗಳ ಚಲನೆಗೆ ಕನಿಷ್ಠ ಅನಾನುಕೂಲವನ್ನು ತಪ್ಪಿಸುವ ನಿಟ್ಟಿನಲ್ಲಿ  ಕಾಮಗಾರಿ  ನಡೆಯುತ್ತಿದೆ ಎಂದು ನೈರುತ್ಯ ರೈಲ್ವೆ, ಮೈಸೂರು ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

 ರದ್ದಾಗಿರುವ ರೈಲುಗಾಡಿಗಳ ಮಾಹಿತಿ ಇಲ್ಲಿದೆ ನೋಡಿ..

19.06.2019 ರ ರೈಲು ಸಂಖ್ಯೆ 22681 ಮೈಸೂರು- ಚೆನ್ನೈ  ಸೂಪರ್ ಫಾಸ್ಟ್ ಸಾಪ್ತಾಹಿಕ  ಎಕ್ಸ್ ಪ್ರೆಸ್  ಸಂಪೂರ್ಣವಾಗಿ ರದ್ದುಗೊಂಡಿದೆ. ಅಂತೆಯೇ 20.06.2019 ರ ರೈಲು ಸಂಖ್ಯೆ 22682  ಚೆನ್ನೈ-ಮೈಸೂರು  ಸೂಪರ್ ಫಾಸ್ಟ್ ಸಾಪ್ತಾಹಿಕ  ಎಕ್ಸ್ ಪ್ರೆಸ್  ಸಂಪೂರ್ಣವಾಗಿ ರದ್ದುಗೊಂಡಿದೆ.

  1. 17.06.2019 ರಿಂದ 22.06.2019 ರವರೆಗೆ ರೈಲು ಸಂಖ್ಯೆ 16591 ಹುಬ್ಬಳ್ಳಿ- ಮೈಸೂರು ಹಂಪಿ ಎಕ್ಸ್‌ಪ್ರೆಸ್ ಪ್ರಯಾಣವು ಪಾಂಡವಪುರದಿಂದ ಮೈಸೂರುವರೆಗೆ ಭಾಗಶಃ ರದ್ದಾಗಿದೆ.
  2. 18.06.2019 ರಿಂದ 23.06.2019 ರವರೆಗೆ ರೈಲು ಸಂಖ್ಯೆ 16535 ಮೈಸೂರು -ಸೋಲಾಪುರ್ ಗೋಲಗುಂಬಜ್ ದೈನಿಕ  ಎಕ್ಸ್‌ಪ್ರೆಸ್ ಪ್ರಯಾಣವು  ಮೈಸೂರಿನಿಂದ ಪಾಂಡವಪುರದ ನಡುವೆ  ಭಾಗಶಃ ರದ್ದಾಗಿದೆ.

Key words: Renovation work – Mysore- Railway Station-train- cancel