ಯುಗಾದಿಯ ಹಿನ್ನೆಲೆಯಲ್ಲಿ ಧಾರ್ಮಿಕ ದಿನ ಆಚರಣೆ: ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲು ಮನವಿ.

ಮೈಸೂರು, ಏಪ್ರಿಲ್ 01 (www.justkannada.in):ಸರ್ಕಾರದ ನಿರ್ದೇಶನದಂತೆ 2022ರ ಏಪ್ರಿಲ್ 2ರ ಶನಿವಾರ ಶುಭಕೃತ ನಾಮ ಸಂವತ್ಸರ ಚಾಂದ್ರಮಾನ ಯುಗಾದಿಯ ಹಿನ್ನೆಲೆ ಮೈಸೂರಿನ ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯ, ಮೈಸೂರು ಅರಮನೆ ಉತ್ತರದ್ವಾರದ ಆಂಜನೇಯಸ್ವಶಮಿ ದೇವಾಲಯ, ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ಮತ್ತು ಸಮೂಹ ದೇವಾಲಯ ಹಾಗೂ ತಲಕಾಡಿನ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಸಮೂಹ ದೇವಾಲಯಗಳಲ್ಲಿ “ಧಾರ್ಮಿಕ ದಿನ”ವನ್ನು ಆಚರಿಸಲಾಗುತ್ತಿದೆ.

ಬೆಳಿಗ್ಗೆ 5.30 ರಿಂದ ವಿಶೇಷ ಅಭಿಷೇಕ, ಪೂಜೆ, ಬೇವು ಬೆಲ್ಲ ಮತ್ತು ಪ್ರಸಾದ ವಿತರಣೆ ಹಾಗೂ ಸಂಜೆ 5 ಗಂಟೆಗೆ ಉತ್ಸವ ಮತ್ತು ಪಂಚಾಂಗ ಶ್ರವಣ, 5.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

key words: Religious Day -Celebration-yugadi-mysore