ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ ಪರಿಹಾರ: ಸಚಿವ ಅಶೋಕ್ ಸ್ಪಷ್ಟನೆ, ಇಲ್ಲಿದೆ ಮಾರ್ಗಸೂಚಿ…

ಬೆಂಗಳೂರು, ಸೆಪ್ಟೆಂಬರ್ 30, 2021 (www.justkannada.in):ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ ರಾಜ್ಯ ಸರ್ಕಾರ 1 ಲಕ್ಷ ರೂಪಾಯಿ ಪರಿಹಾರ ಕೊಡುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟನೆ ಪಡಿಸಿದ್ದಾರೆ.

“ರಾಜ್ಯ ಸರ್ಕಾರ ಜನರ ಪರವಾಗಿ ಇದೆ. ನಮ್ಮದು ಜನಸ್ನೇಹಿ ಸರ್ಕಾರ. ಬಿಪಿಎಲ್ ಕುಟುಂಬದ ದುಡಿಯುವ ಸದಸ್ಯನನ್ನು ಕಳೆದುಕೊಂಡವರಿಗೆ 1 ಲಕ್ಷ ರೂ ವಿಪತ್ತು ಪರಿಹಾರ ನಿಧಿಯಿಂದ ಕೊಡುತ್ತೇವೆ ಎಂದು ವಿಧಾನ ಸೌಧದಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಕೋವಿಡ್‌ನಿಂದ ಮೃತಪಟ್ಟ ಎಲ್ಲರಿಗೂ 50 ಸಾವಿರ ರೂ‌. ನೀಡುತ್ತದೆ. ಬಿಪಿಎಲ್ ಕಾರ್ಡ್ ಇರುವವರಿಗೆ ಒಟ್ಟು 1.5 ಲಕ್ಷ ರೂ‌. ಪರಿಹಾರ ಸಿಗುತ್ತದೆ” ಎಂದು ಭರವಸೆ ಕೊಟ್ಟಿದ್ದಾರೆ.

ಮಾರ್ಗಸೂಚಿ ಇಲ್ಲಿದೆ
ರಾಜ್ಯದ ಎಲ್ಲ ತಾಲ್ಲೂಕು ಕಚೇರಿ, ನಾಡ ಕಚೇರಿ, ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಕಚೇರಿಯಲ್ಲಿ ಕೋವಿಡ್ ಪರಿಹಾರಕ್ಕೆ ಅರ್ಜಿ ಸಲ್ಲಿಸಬಹುದು. ಎಲ್ಲೇ ಮೃತಪಟ್ಟಿದ್ದರೂ ಮೃತರ ವಾಸಸ್ಥಳ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಬೇಕು. ಅಧಿಕೃತ ಮರಣ ಪ್ರಮಾಣ ಪತ್ರ ಹೊಂದಿರಬೇಕು. ಬಿಪಿಎಲ್ ಕುಟುಂಬದ ದುಡಿಯುವ ಸದಸ್ಯ ನಾಗಿರಬೇಕು ಜೊತೆಗೆ ಮೃತರ ವಯಸ್ಸು 18 ವರ್ಷ ತುಂಬಿರಬೇಕು’ ಎಂದು ಮಾರ್ಗಸೂಚಿ ಬಿಡುಗಡೆ ಆರ್. ಅಶೋಕ್ ವಿವರಿಸಿದ್ದಾರೆ.

key words: Relief fund for BPL family who died from covid: Minister Ashok

ENGLISH SUMMARY…

Compensation to the family of deceased due to COVID: Minister Ashok clarifies.
Bengaluru, September 30, 2021 (www.justkannada.in): Revenue Minister R. Ashok has clarified that the State Government will provide a sum of Rs. 1 lakh as compensation to the BPL family members of those who died due to COVID.
Speaking at the Vidhana Soudha today, he informed that the State Government is for the people, and the present government is people-friendly. “We will provide Rs. 1 lakh compensation from the Disaster Relief Funds. The Govt. of India will provide Rs.50,000. Thus the BPL families who have lost their members due to COVID will get Rs. 1.5 lakh compensation,” he informed.
Guidelines
The guidelines to claim the compensation amount is as follows: The application seeking compensation can be submitted at all the Taluk Offices, BBMP Ward Offices. Wherever the person might have expired, the application should be submitted in the place where the deceased was living. The claimants should possess a valid Death Certificate, be a working member of the BPL family, and should be above 18 years of age.

Keywords: COVID compensation/ Rs.1.5 lakh/ State Government/ Revenue Minister R. Ashok