ಚೇತರಿಸಿಕೊಂಡ ಅರ್ಜುನ್ ಜನ್ಯ ಮತ್ತೆ ಕೆಲಸಕ್ಕೆ ವಾಪಸ್

Promotion

ಬೆಂಗಳೂರು, ಮಾರ್ಚ್ 20, 2020 (www.justkannada.in): ಅನಾರೋಗ್ಯದಿಂದ ಚೇತರಿಸಿಕೊಂಡ ಅರ್ಜುನ್ ಜನ್ಯ ಮತ್ತೆ ಕೆಲಸಕ್ಕೆ ವಾಪಸ್ ಆಗಿದ್ದಾರೆ.

ಅರ್ಜುನ್ ಜನ್ಯ ಒಂದಿಷ್ಟು ದಿನಗಳ ಕಾಲ ವಿಶ್ರಾಂತಿಯಲ್ಲಿದ್ದರು. ಸದ್ಯ ಚೇತರಿಸಿಕೊಂಡಿರುವ ಅರ್ಜುನ್ ಮತ್ತೆ ಕೆಲಸಕ್ಕೆ ವಾಪಸ್ ಆಗಿದ್ದಾರೆ.

ಅರ್ಜುನ್ ಜನ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜನ್ಯ ಸಂಗೀತ ನಿರ್ದೇಶನದ ಸಾಲು ಸಾಲು ಸಿನಿಮಾಗಳು ರಿಲೀಸ್ ಗೆ ತಯಾರಿ ನಡೆಸುತ್ತಿವೆ.

ಸದ್ಯ ಜನ್ಯ ವಾಪಸ್ ಆಗುವ ಮೂಲಕ ಅರ್ಧಕ್ಕೆ ನಿಂತ ಕೆಲಸವನ್ನು ಮುಂದುವರೆಸುತ್ತಿದ್ದಾರೆ. ಅಂದ್ಹಾಗೆ ಜನ್ಯ ಕೆಲಸಕ್ಕೆ ಮರಳಿರುವುದು ನಿರ್ದೇಶಕ ಪ್ರೇಮ್ ಸಾರಥ್ಯದಲ್ಲಿ ಬರುತ್ತಿರುವ ಏಕ್ ಲವ್ ಯಾ ಸಿನಿಮಾ ಕೆಲಸಕ್ಕೆ.