ಸಚಿವರಾದ ಬೆನ್ನಲ್ಲೆ ‘ಕೈ’ ನಾಯಕರೊಬ್ಬರ ವಿರುದ್ದ ವಾಗ್ದಾಳಿ: ಯಾವ ಖಾತೆ ನೀಡಿದ್ರೂ ಸ್ವೀಕರಿಸಲು ಸಿದ್ಧ ಎಂದ್ರು ಆರ್. ಶಂಕರ್…

ಬೆಂಗಳೂರು,ಜು,14,2019(www.justkannada.in):  ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಪಕ್ಷೇತರ ಶಾಸಕ ಆರ್. ಶಂಕರ್ ಇದೀಗ ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ ಕೋಳಿವಾಡ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರ ಬಿದ್ದ ಹೊಗುತ್ತೆ ಎಂಬ  ಕೆ.ಬಿ  ಕೊಳಿವಾಡ ಹೇಳಿಕೆ ವಿಚಾರ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ನೂತನ ಸಚಿವ ಆರ್.ಶಂಕರ್, ಸರ್ಕಾರ ಬಿದ್ದ ಹೊಗುತ್ತೆ ಅಂತಾ ಹೇಳೊಕೆ ಅವರಿಗೇನು ನೈತಿಕತೆ ಇದೆ. ಎರಡು ಬಾರಿ ಚುನಾವಣೆಗೆ ಸ್ಪರ್ದಿಸಿ ಸೋತಿದ್ದಾರೆ. ಕಳೆದ ಬಾರಿ ನಾನು ಗೆಲ್ಲಬಹುದು ಅಂತ ಪರಿಸ್ಥಿತಿ ಇತ್ತು. ಆದ್ರೂ ಸಿದ್ಧರಾಮಯ್ಯನವರು ಕೊಳಿವಾಡ ಅವರಿಗೆ ಟಿಕೆಟ್ ಕೊಟ್ರು. ಇಂದು ಸಿದ್ಧರಾಮಯ್ಯ ಅವರಿಗೇನೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಕೆಬಿ ಕೋಳಿವಾಡರಿಗೆ ಅರಳುಮರಳು. ಅವರಿಗೆ ನನ್ನ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಜೆಡಿಎಸ್ ಶಾಸಕರು ಕಾಂಗ್ರೆಸ್ ಗೆ ಬಂದಾಗ ಅನರ್ಹತೆ ಗೊಳಿಸುವುದಾಗಿ ಬ್ಲಾಕ್ ಮೇಲ್ ಮಾಡಿ ಕೋಳಿವಾಡ ಟಿಕೆಟ್ ಪಡೆದರು. ಆದರೆ ಅವರು ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅವರ ಕೊಡುಗೆ ಏನಿದೆ ಎಂದು ಆರ್.ಶಂಕರ್ ಪ್ರಶ್ನಿಸಿದರು.

ಸಚಿವ ಸ್ಥಾನ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಆರ್.ಶಂಕರ್, ಸಚಿವ ಸ್ಥಾನ ಸಿಕ್ಕಿರುವುದು ನನಗೆ ಸಂತಸ ತಂದಿದೆ. ನನಗೆ ಯಾವುದೇ ಖಾತೆಯನ್ನು ನೀಡಿದ್ರು ಸ್ವಿಕರಿಸಲು ಸಿದ್ಧ. ಈಗ ಸದ್ಯಕ್ಕೆ ಖಾಲಿ ಇರುವ ಸಚಿವ ಸ್ಥಾನ ಕೊಡಬಹುದು ಎಂದು ಪರೋಕ್ಷವಾಗಿ ಪೌರಾಡಳಿತ ಸ್ಥಾನ ಸಿಗಲಿದೆ ಎಂಬ ಸುಳಿವೂ  ನೀಡಿದರು.

ರಮೇಶ್ ಜಾರಕಿಹೊಳಿ ನಾನು ಒಳ್ಳೆಯ ಸ್ನೆಹಿತರು. ನಾನು ರಮೇಶ್ ಜಾರಕಿಹೊಳಿಯವರ ಮನೆಗೆ ಹೊಗಿದ್ದು ಅವರ ಮನವೊಲಿಸೊಕೆ. ಆದ್ರೆ ಮಾಧ್ಯಮಗಳು ನಮ್ಮ ಭೇಟಿಯನ್ನು ತಪ್ಪಾಗಿ ಬಿತ್ತರಿಸಿವೆ ಎಂದು ಮಾಧ್ಯಮಗಳ ವಿರುದ್ದ ಅಸಮಾಧಾನ ಹೊರ ಹಾಕಿದರು.

Key words: Ready to accept any ministerial position -New minister R. Shankar

#Bangalore #minister #RShankar #outrage #kbkoliwada