ಸಂಸದೆ ಸುಮಲತಾ ಹೇಳಿದ ದಿನ ಆಣೆ ಮಾಡಲು ಸಿದ್ಧ: ದಾಖಲೆ ತರಲಿ- ಸವಾಲು ಸ್ವೀಕರಿಸಿದ ಶಾಸಕ ಸಿ.ಎಸ್ ಪುಟ್ಟರಾಜು.

Promotion

ಮಂಡ್ಯ,ಸೆಪ್ಟಂಬರ್,19.2022(www.justkannada.in):  ಸಂಸದೆ ಸುಮಲತಾ ಹಾಗೂ ಜೆಡಿಎಸ್ ಶಾಸಕರ ನಡುವಿನ ವಾಕ್ ಸಮರ ಮುಂದುವರೆದಿದ್ದು, ಎಟಿಗೆ ಎದುರೇಟು, ಆರೋಪಕ್ಕೆ ಪ್ರತ್ಯಾರೋಪ ಜೋರಾಗಿ ನಡೆಯುತ್ತಿದೆ.

ಈ ನಡುವೆ ಸಂಸದೆ ಸುಮಲತಾ ಅಂಬರೀಶ್ ಟೆಂಡರ್ ಕಮಿಷನ್ ವಿಚಾರವಾಗಿ ಆಣೆ ಪ್ರಮಾಣಕ್ಕೆ ಸಂಬಂಧಿಸಿದಂತೆ ಹಾಕಿದ್ಧ ಸವಾಲನ್ನ ಜೆಡಿಎಸ್ ಶಾಸಕ ಪುಟ್ಟರಾಜು ಸ್ವೀಕರಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿ.ಎಸ್ ಪುಟ್ಟರಾಜು, ಅದೇನು ದಾಖಲೆ ಇದೇ ತರಲಿ ನಾನೂ ದಾಖಲೆ ತರುತ್ತೇನೆ. ಗಾಳಿಯಲ್ಲಿ ಗುಂಡು ಹೊಡೆಯೋದಲ್ಲ ಎದೆಗೆ ಹೊಡೆಯಬೇಕು. ಸುಮಲತಾ ಹೇಳಿದ ದಿನ ಆಣೆ ಮಾಡಲು ಸಿದ್ಧನಿದ್ದೇನೆ. ಅಂಬರೀಶ ಪತ್ನಿ ಅನ್ನೋ ನಕಾರಣಕ್ಕೆ ಗೆದ್ದಿದ್ದಾರೆ . ಎಲ್ಲಾ ನಾಯಕರು ಮೂಡ ಸೈಟ್ ಪಡೆದಿದ್ದಾರೆ  ದಾಖಲೆಗಳಿದ್ರೆ ತರಲಿ ಎಂದು ಪ್ರತಿಸವಾಲು ಹಾಕಿದರು.

ಕಮಿಷನ್ ಗೆ ಆಸೆ ಪಟ್ಟಿದ್ದರೇ  ನನ್ನ ಕ್ಷೇತ್ರದಲ್ಲಿ ಉಳಿಯಲು ಸಾಧ್ಯವಿರಲಿಲ್ಲ ಲಘು ಮಾತು ಸಂಸದೆ ಸುಮಲತಾರಿಗೆ ಶೋಭೆ ತರಲ್ಲ.  ದುಡಿದ ದುಡ್ಡಿನಿಂತ ಕ್ಷೇತ್ರದ ಪರ ಕೆಲಸ ಮಾಡುತ್ತಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

Key words: Ready – swear – MP- Sumalatha – MLA- CS Puttaraju