ನನ್ನ ಹೇಳಿಕೆಯಿಂದ  ಯಾರಿಗಾದ್ರೂ ನೋವುಂಟಾಗಿದ್ದರೇ ಕ್ಷಮೆ ಕೇಳಲು ಸಿದ್ಧ- ಶಾಸಕ ಪ್ರಿಯಾಂಕ್ ಖರ್ಗೆ.

Promotion

ಕಲ್ಬುರ್ಗಿ,ಆಗಸ್ಟ್,13,2022(www.justkannada.in):  ಮಹಿಳೆಯರ ಬಗ್ಗೆ ನೀಡಿದ್ಧ ಹೇಳಿಕೆಗೆ ತೀವ್ರ ಆಕ್ಷೇಪ ಉಂಟಾದ ಹಿನ್ನೆಲೆ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ,  ಕ್ಷಮೆ ಕೋರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಶಾಸಕ ಪ್ರಿಯಾಂಕ್ ಖರ್ಗೆ , ಹೆಣ್ಣು ಮಕ್ಕಳಿಗೆ ಅಗೌರವ ತೋರುವ ಉದ್ಧೇಶದಿಂದ ಹೇಳಿಕೆ ನೀಡಿಲ್ಲ. ಹೇಳಿಕೆಯಿಂದ ಯಾರಿಗಾದ್ರು ನೋವುಂಟಾಗಿದ್ದರೇ ಕ್ಷಮೇ ಕೇಳಲು ನಾನು ಸಿದ್ಧನಿದ್ದೇನೆ ಎಂದಿದ್ದಾರೆ.

ಭ್ರಷ್ಟಚಾರ ವಿರೋಧಿಸಿ ಲಂಚ ಮಂಚದ ಸರ್ಕಾರ ಎಂದಿದ್ದೆ. ತಮ್ಮ ಅಕ್ರಮ ಮುಚ್ಚಿ ಹಾಕಲು ಬಿಜೆಪಿಯವರು  ನನ್ನ ಹೇಳಿಕೆ ತಿರುಚಿದ್ದಾರೆ.  ಈ ಮೂಲಕ ಕೆಪಿಟಿಸಿಎಲ್ ಅಕ್ರಮ ಮುಚ್ಚಿ ಹಾಕಲು ಯತ್ನಿಸಿದ್ದಾರೆ . ಕೆಲಸಕ್ಕಾಗಿ ಬಂದಯುವತಿಗೆ ಸಚಿವರೊಬ್ಬರು ಮೋಸಮಾಡಿದ್ರು. ನಂತರ ಸಿಕ್ಕಿ ಬಿದ್ದಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.  ಇನ್ನು ಸದನದಲ್ಲಿ ಬಿಜೆಪಿಯ ಸಚಿವರು ಅಶ್ಲೀಲ ವಿಡಿಯೋ ವಿಕ್ಷೀಸಿದರು. ಆದರೆ ಈವರೆಗೂ ಕ್ಷಮೆ ಕೇಳವಂತೆ  ಬಿಜೆಪಿಯ ಯಾವೊಬ್ಬನೂ ಕೇಳಲಿಲ್ಲ.  ಬಳಿಕ ಸೋತರೂ ಎಂಎಲ್ ಸಿ ಮಾಡಿ ಡಿಸಿಎಂ ಮಾಡಿದ್ರು ಎಂದು ಬಿಜೆಪಿಯನ್ನ ಟೀಕಿಸಿದ್ದಾರೆ.

Key words:  ready – apologize – hurt – statement-MLA- Priyank Kharge.