ಸಂವಿಧಾನದ ಪೀಠಿಕೆ ಓದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿ

ರಾಯಚೂರು,ನವೆಂಬರ್,12,2020 : ರಾಯಚೂರು ಜಿಲ್ಲೆಯ ಯುವ ಜೋಡಿ ಬುದ್ಧ, ಬಸವ ಹಾಗೂ ಅಂಬೇಡ್ಕರ್‌, ಜ್ಯೋತಿಬಾಫುಲೆ ಹಾಕಿಕೊಟ್ಟ ಆದರ್ಶ ಪಥ ಸ್ಮರಿಸಿ, ಸಂವಿಧಾನದ ಪೀಠಿಕೆ ಓದುವ ಮೂಲಕ ಪರಸ್ಪರ ಹಾರ ಬದಲಾಯಿಸಿಕೊಂಡು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು.kannada-journalist-media-fourth-estate-under-lossಮಸ್ಕಿ ತಾಲ್ಲೂಕಿನ ಗೋನಾಳ ಗ್ರಾಮದ ರಂಗಭೂಮಿ ಕಲಾವಿದ ಧರ್ಮರಾಜ್‌ ಗೋನಾಳ ಹಾಗೂ ಅದೇ ತಾಲ್ಲೂಕಿನ ಚಿಕ್ಕ ಕಡಬೂರಿನ ಗೌರಮ್ಮ ಅವರು ಯಾವುದೇ ಸಂಪ್ರದಾಯದ ಕಟ್ಟುಪಾಡು, ವಾದ್ಯಗಳ ಸದ್ದಿಲ್ಲದೇ, ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಆರ್‌ವೈಎಫ್‌ನ ರಾಜ್ಯ ಸಂಚಾಲಕ ನಾಗರಾಜ ಪೂಜಾರ, ಪ್ರಗತಿಪರ ಚಿಂತಕರಾದ ದೇವರಾಜ, ಮಂಜು ಸಾಸಲಮರಿ, ಸೋಮನಾಥ, ಸಿದ್ದು ಉದ್ಬಾಳ, ಮರಿದೇವ, ಕಿರಣ್ ಕುಮಾರ ಹಾಗೂ ಮಲ್ಲಿಕಾರ್ಜುನ ಸೇರಿದಂತೆ ಸಮಾನ ಮನಸ್ಕರ ಗೆಳೆಯರ ತಂಡ ಭಾಗವಹಿಸಿ ಶುಭ ಹಾರೈಸಿದ್ದಾರೆ.

Read,preamble,Constitution,New,Couple,Entered,Life

 

English summary…

Young couple enter into wedlock by reading the Constitution Preamble
Raichur, Nov. 12, 2020 (www.justkannada.in): In a rare kind of wedding, a young couple in Raichur District entered into wedlock by taking a pledge to follow the ideals laid down by Buddha, Basava, Ambedkar and Jyothibai Phule, and reading the Constitution Preamble and exchanging garlands.
While the groom Dharmaraj, who is a theater artiste hails from Gonala Village in Maski Taluk, the bride Gowramma hails from Chikkakadaburu Village of the same Taluk. They entered into wedlock without the traditional recitals.
Keywords: Rare wedding-Raichur-

key words : Read-preamble-Constitution-New-Couple-Entered-Life