Promotion
ನವದೆಹಲಿ,ನ,1,2019(www.justkannada.in): ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್ ಪತ್ತೆಯಾಗಿದ್ದು ಆರ್ ಡಿಎಕ್ಸ್ ಬಾಂಬ್ ಇರುವ ಶಂಕೆ ವ್ಯಕ್ತವಾಗಿದೆ.
ದೆಹಲಿ ಏರ್ ಪೋರ್ಟ್ ನ ಟರ್ಮಿನಲ್ 3ರಲ್ಲಿ ಮಧ್ಯರಾತ್ರಿ 1 ಗಂಟೆ ವೇಳೆಗೆ ಅನುಮಾನಸ್ಪದ ಪತ್ತೆಯಾಗಿದ್ದು ಆರ್ಡಿಎಕ್ಸ್ ಇರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ತೀವ್ರ ಪರಿಶೀಲನೆ ನಡೆಸಿದ್ದು ವಿಮಾನ ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿ ಭದ್ರತೆ ಹೆಚ್ಚಿಸಲಾಗಿದೆ.
ಮೇಲ್ನೋಟಕ್ಕೆ ಬ್ಯಾಗ್ ನಲ್ಲಿ ಆರ್ಡಿಎಕ್ಸ್ ಇದೆ ಎನ್ನಲಾಗಿದೆ. ಪೊಲೀಸರು ಏರ್ ಪೋರ್ಟ್ ನ ಟರ್ಮಿನಲ್ 2 ಮತ್ತು 3 ರ ಮಾರ್ಗವನ್ನು ತಾತ್ಕಾಲಿಕವಾಗಿ ಬಂದ್ ಮಾಡಿದ್ದಾರೆ.
Key words: RDX- detected –suspicious- bag – Delhi airport.