ರೆಪೊ ದರ ಇಳಿಸಿದ ಭಾರತೀಯ ರಿಸರ್ವ್ ಬ್ಯಾಂಕ್…

Promotion

ನವದೆಹಲಿ,ಜೂ,6,2019(www.justkannnada.rn)  ಭಾರತೀಯ ರಿಸರ್ವ್ ಬ್ಯಾಂಕ್  ರೆಪೊ ದರ 25 ಬೆಸಿಸ್ ಪಾಯಿಂಟ್ ಇಳಿಕೆ ಮಾಡಿದೆ.

ರೆಪೋ ದರದಲ್ಲಿ 25 ಬೇಸಿಕ್ ಅಂಕಗಳಷ್ಟು ಕಡಿತ ಮಾಡಿದ್ದು, ಈ ಮೂಲಕ ಶೇ 6ರಷ್ಟಿದ್ದ ರೆಪೋ ದರವನ್ನು ಶೇ 5.75ಕ್ಕೆ ಇಳಿಕೆ ಮಾಡಲಾಗಿದೆ. ಹಾಗೆಯೇ ರಿವರ್ಸ್ ರೆಪೋ ದರವನ್ನು ಶೇ 5.50ಕ್ಕೆ ಮತ್ತು ಬ್ಯಾಂಕ್ ದರವನ್ನು ಶೇ 6ಕ್ಕೆ ಹೊಂದಾಣಿಕೆ ಮಾಡಲಾಗಿದೆ.

ರೆಪೊ ದರ ಇಳಿಕೆಯಾದ ಹಿನ್ನೆಲೆ ಗೃಹಸಾಲದ ಮೇಲಿನ ಬಡ್ಡಿದರ ಗೃಹ ಸಾಲ, ವಾಹನ ಸಾಲದ ಮೇಲಿನ ಬಡ್ಡಿದರ ಇಳಿಕೆಯಾಗುವ ನಿರೀಕ್ಷೆಯಿದೆ. 2019-20ರ ಅವಧಿಯ ಮೊದಲಾರ್ಧದಲ್ಲಿ ಹಣದುಬ್ಬರದ ದರವನ್ನು ಶೇ 3.0-3.1ರಷ್ಟು ಅಂದಾಜಿಸಲಾಗಿದ್ದು, ಹಣಕಾಸು ಸಾಲಿನ ಎರಡನೆಯ ಅವಧಿಯಲ್ಲಿ ಶೇ 3.4-3.7ರವರೆಗೆ ಅಂದಾಜು ಮಾಡಲಾಗಿದೆ.

Key words: RBI reduces repo rates

#RBI #reduces #repo #rates