ಮತ್ತೊಂದು ‘ಮಲ್ಲ’ ಚಿತ್ರ ಮಾಡಿ: ಪತ್ನಿ ಮನದಾಸೆ ಬಿಚ್ಚಿಟ್ಟ ಕ್ರೇಜಿಸ್ಟಾರ್

Promotion

ಬೆಂಗಳೂರು, ಆಗಸ್ಟ್ 08, 2019 (www.justkannada.in): ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪತ್ನಿಗೆ ಮತ್ತೊಂದು ಮಲ್ಲ’ ಸಿನಿಮಾವನ್ನು ಮಾಡಬೇಕು ಅನ್ನೋ ಆಸೆ ಇದೆಯಂತೆ!

ಇತ್ತಿಚೆಗೆ ಮಂಡ್ಯ ರಮೇಶ್ ಏರ್ಪಡಿಸಿದ್ದ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದ ರವಿಚಂದ್ರನ್,ತನ್ನ ಪತ್ನಿ ಹೇಳಿದ ಮಾತನ್ನು ಕಾರ್ಯಕ್ರಮದಲ್ಲಿ ಬಿಚ್ಚಿಟ್ಟಿದ್ದಾರೆ.

ಮಲ್ಲ2 ಸಿನಿಮಾ ಮಾಡಿ ಎಂದು ನನ್ನ ಪತ್ನಿ ಹೇಳುತ್ತಿದ್ದಾರೆ. ಆದರೆ ಅಭಿಮಾನಿಗಳು ಇಷ್ಟ ಪಡುವ ಸಿನಿಮಾವನ್ನು ಖಂಡಿತವಾಗಿ ಮಾಡುತ್ತೇನೆ ಎಂದು ಹೇಳಿದ್ದಾರೆ.