ಥಿಯೇಟರ್’ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ರವಿತೇಜ ‘ಕ್ರ್ಯಾಕ್’!

Promotion

ಬೆಂಗಳೂರು, 22 ಜನವರಿ, 2021 (www.justkannada.in): ರವಿತೇಜ ನಟನೆಯ ಸಿನಿಮಾ ‘ಕ್ರ್ಯಾಕ್​​’! ನಾಲ್ಕು ದಿನಗಳಲ್ಲಿ 26.30 ಕೋಟಿ ರೂ. ಗಳಿಸಿದೆ ಎನ್ನಲಾದ ಸುದ್ದಿ ಹೊರ ಬಿದ್ದಿದೆ.

ಮಾಸ್ ಮಹಾರಾಜ ರವಿತೇಜ ‘ಕ್ರ್ಯಾಕ್’ ಸಿನಿಮಾ ಒಳ್ಳೆಯ ಕಂಬ್ಯಾಕ್​ ನೀಡಿದೆ.

ಚಿತ್ರ ಭಾರಿ ಸೌಂಡ್ ಮಾಡುತ್ತಿದೆ.ರವಿತೇಜ ಒತ್ತಾಯದ ಮೇರೆಗೆ ನಿರ್ಮಾಪಕ ಠಾಗೋರ್ ಮಧು ಅವರು ಸಿನಿಮಾವನ್ನು ಜನವರಿ 9 ರಂದು ಥಿಯೇಟರ್​ನಲ್ಲೇ ರಿಲೀಸ್​ ಮಾಡಿದ್ದರು. ಇದೀಗ ಚಿತ್ರದ ಕಲೆಕ್ಷನ್ ಭರ್ಜರಿಯಾಗಿಯೇ ಆಗುತ್ತಿದೆ.

ಮೊದಲ ದಿನವೆ ಬರೋಬ್ಬರಿ 6.54 ಕೋಟಿ ರೂಪಾಯಿ ಗಳಿಸಿತ್ತು. ಎರಡನೇ ದಿನವಾದ ಭಾನುವಾರದಂದು ಸಿನಿಮಾ 3.15 ಕೋಟಿ ರೂಪಾಯಿ ಸಂಪಾದಿಸಿತ್ತು.