ಮದುವೆ ಮನೆಗೆ ಆಟೋದಲ್ಲಿ ಬಂದ ರವೀನಾ ಟಂಡನ್ !

Promotion

ಮುಂಬೈ, ಮಾರ್ಚ್ 03, 2020 (www.justkannada.in): ಸಾಮಾನ್ಯರಂತೆ ಆಟೋದಲ್ಲಿ ಪ್ರಯಾಣ ಬೆಳೆಸಿ ಗಮನ ಸೆಳೆದಿದ್ದಾರೆ ನಟಿ ರವೀನಾ ಟಂಡನ್.

ಈ ಕುರಿತು ಸ್ವತ: ರವೀನಾ ಟ್ವೀಟರ್ ನಲ್ಲಿ ವಿಡೀಯೋ ಒಂದನ್ನು ಪೋಸ್ಟ್ ಮಾಡಿದ್ದು, ಕಾರ್ ಸಿಗದಿದ್ದರಿಂದ ಮಗಳ ಜೊತೆ ಆಟೋ ಹತ್ತಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗಿ ಬರೆದುಕೊಂಡಿದ್ದಾರೆ.

ನಾನು ಬೇಗನೇ ಸಿಕ್ಕ ಆಟೋದಲ್ಲಿ ಕುಳಿತುಕೊಂಡೆ. ಕಾರ್ ಗಾಗಿ ಕಾಯುವ ಸಮಯ ನನ್ನ ಬಳಿ ಇರಲಿಲ್ಲ. ನನ್ನ ಸಂಬಂಧಿ ಮೆಹಂದಿ ಕಾರ್ಯಕ್ರಮಕ್ಕೆ ತಡವಾಗುತ್ತಿತ್ತು. ಬಹುತೇಕರು ತಲುಪಿದ್ದರಿಂದ ಆಟೋದಲ್ಲಿ ಪ್ರಯಾಣ ಬೆಳೆಸಿದೆ. ಮುಂಬೈ ಆಟೋವಾಲಾಗಳು ಯಾವ ಆಪ್ತ ಬಾಂಧವರಿಗಿಂತ ಕಡಿಮೆ ಏನಿಲ್ಲ ಎಂದಿದ್ದಾರೆ.