ಆನೇಕಲ್ ಹೊರವಲಯದ ರೆಸಾರ್ಟ್’ನಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದ ಯುವಕ-ಯುವತಿಯರು ಈಗ ಪೊಲೀಸರ ಅತಿಥಿ!

Promotion

ಬೆಂಗಳೂರು, ಸೆಪ್ಟೆಂಬರ್ 19, 2021 (www.justkannada.in): ಭಾನುವಾರ ತಡರಾತ್ರಿ ರೇವ್ ಪಾರ್ಟಿ ನಡೆಯುತ್ತಿದ್ದ ಜಾಗಕ್ಕೆ ಆನೇಕಲ್ ಪೊಲೀಸರು ದಾಳಿ ನಡೆಸಿ ಕೆಲ ಯುವಕ-ಯುವತಿಯರನ್ನು ವಶಕ್ಕೆ ಪಡೆದಿದ್ದಾರೆ.

ಪಾರ್ಟಿ ಮಾಡುತ್ತಿದ್ದ ಕೆಲ ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳು ಸೇರಿದಂತೆ 14 ಜನರನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

7 ಕಾರುಗಳು 16 ಬೈಕ್ಗಳನ್ನ ಸೀಜ್ ಮಾಡಲಾಗಿದೆ. ಹಸಿರು ವ್ಯಾಲಿಯ ರೆಜಾರ್ಟ್ನಲ್ಲಿ ಪಾರ್ಟಿ ನಡೆಯುತ್ತಿತ್ತು. ರೆಜಾರ್ಟ್ ಮಾಲೀಕ ನಾಪತ್ತೆಯಾಗಿದ್ದಾನೆ.

ವಶಕ್ಕೆ ಪಡೆದ ಎಲ್ಲರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿರುವುದಾಗಿ ಆನೇಕಲ್ ಪೊಲೀಸರ ತಿಳಿಸಿದ್ದಾರೆ.

key words: Rave party raid in Bengaluru skirt and 14 youths arrested