ಮಹಾರಾಷ್ಟ್ರದ ಕ್ಲಸ್ಟರ್ ವಿವಿಯಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿದ ರತನ್ ಟಾಟಾ

Promotion

ಬೆಂಗಳೂರು, ಜೂನ್ 12, 2022 (www.justkannada.in): ಖ್ಯಾತ ಉದ್ಯಮಿ ರತನ್ ಟಾಟಾ ಅವರಿಗೆ ಮಹಾರಾಷ್ಟ್ರದ ಎರಡನೇ ರಾಜ್ಯ ಕ್ಲಸ್ಟರ್ ವಿಶ್ವವಿದ್ಯಾಲಯವಾದ ಎಚ್.ಎಸ್.ಎನ್.ಸಿ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.

ವಿಶ್ವವಿದ್ಯಾಲಯದ ವಿಶೇಷ ಘಟಿಕೋತ್ಸವ ಸಮಾರಂಭದಲ್ಲಿ ಮಹಾರಾಷ್ಟ್ರದ ರಾಜ್ಯಪಾಲ ಮತ್ತು ಎಚ್‌ಎಸ್‌ಎನ್ಸಿ ವಿಶ್ವವಿದ್ಯಾಲಯದ ಕುಲಪತಿ ಭಗತ್ ಕೋಶ್ಯಾರಿ ಅವರು ರತನ್ ಟಾಟಾ ಅವರಿಗೆ ಪದವಿ ಪ್ರದಾನ ಮಾಡಿದ್ದಾರೆ.

ರತನ್ ಟಾಟಾ ಅವರು ಅಭಿವೃದ್ಧಿ, ಶಿಕ್ಷಣ ಮತ್ತು ಎಲ್ಲರ ಉನ್ನತಿಯ ಸಿದ್ಧಾಂತವನ್ನ ಸಾಕಾರಕ್ಕಾಗಿ ಡಾಕ್ಟರೇಟ್‌ ನೀಡಿ ಗೌರವಿಸಲಾಗಿದೆ.