ದಿಲ್ಲಿಯನ್ನು ರೇಪ್ ಕ್ಯಾಪಿಟಲ್ ಎಂದು ಜರಿದಿದ್ದ ಮೋದಿ ಭಾಷಣದ ತುಣುಕು ಹರಿಬಿಟ್ಟ ನೆಟ್ಟಿಗರು ಹೇಳಿದ್ರು ‘ ಅಂದು ನಮೋ, ಇಂದು ರಾಗ

Promotion

 

ಬೆಂಗಳೂರು, ಡಿ.13, 2019 : ( www.justkannada.in news ) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ವಿರೋಧಿಸಿ ಬಿಜೆಪಿ ಮುಖಂಡರು ಗದ್ದಲ ಸೃಷ್ಠಿಸುತ್ತಿರುವ ಬೆನ್ನಲ್ಲೇ, ನರೇಂದ್ರ ಮೋದಿ ಅವರ ಹಳೇ ಹೇಳಿಕೆಯ ತುಣುಕುಗಳು ಜಾಲತಾಣದಲ್ಲಿ ಹರಿ ಬಿಡುವ ಮೂಲಕ ಕಾಂಗ್ರೆಸ್ಸಿಗರು ಸೆಡ್ಡು ಹೊಡೆದಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿಯವರ ‘ ಮೇಕ್ ಇನ್ ಇಂಡಿಯಾ ‘ ಘೋಷಣೆಯನ್ನು ಟೀಕಿಸುತ್ತಾ, ಅದು ‘ ರೇಪ್ ಇನ್ ಇಂಡಿಯಾ’ ಆಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದರು. ರಾಹುಲ್ ರ ಈ ಹೇಳಿಕೆ ಸಂಸತ್ತಿನಲ್ಲೂ ಕಿಡಿ ಎಬ್ಬಿಸಿತ್ತು. ಬಿಜೆಪಿಗರು ಇದನ್ನು ತೀವ್ರವಾಗಿ ಖಂಡಿಸುವ ಮೂಲಕ ಆಕ್ರೋಶ ಹೊರ ಹಾಕಿದ್ದರು.

ಇದೇ ವೇಳೆ ಸಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣದ ತುಣುಕೊಂದನ್ನು ಪೋಸ್ಟ್ ಮಾಡುವ ಮೂಲಕ ನೆಟ್ಟಿಗರು ಬಿಜೆಪಿಯವರ ಕಾಲೆಳೆದಿದ್ದಾರೆ.

ಈ ಹಿಂದೆ, 2013ರ ಚುನಾವಣಾ ಸಂದರ್ಭದಲ್ಲಿ ನರೇಂದ್ರ ಮೋದಿ ಭಾಷಣದ ವೇಳೆ ` ದಿಲ್ಲಿಯನ್ನು ರೇಪ್ ಕ್ಯಾಪಿಟಲ್ ‘ ಎಂದಿದ್ದರು. ಜತೆಗೆ ದೇಶವು ಇಂದು ವಿಶ್ವದ ಎದುರು ತಲೆತಗ್ಗಿಸುವಂತಾಗಿದೆ ಎಂದು ಟೀಕಿಸಿದ್ದರು. ಅದೇ ರೀತಿ
ಈಗ ರಾಹುಲ್ ಗಾಂಧಿ ಭಾಷಣದಲ್ಲಿ `ನೀವು ಮೇಕ್ ಇನ್ ಇಂಡಿಯಾ ಮಾಡುತ್ತೇವೆ ಎಂದು ಬಂದವರು ರೇಪ್ ಇನ್ ಇಂಡಿಯಾ ಮಾಡಿದ್ದೀರಿ. ಬಿಜೆಪಿಯಿಂದ ಗೆದ್ದ ಶಾಸಕನೇ ರೇಪ್ ಮಾಡುತ್ತಾನೆ, ಅಪಘಾತ ಮಾಡಿಸುತ್ತಾನೆ, ಪ್ರಧಾನಿ ಮೋದಿ ಏನೂ ಮಾತನಾಡಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ರಾಹುಲ್ ಗಾಂಧಿ ಹೇಳಿದ್ದು ತಪ್ಪು ಎಂದಾದರೆ, ಈ ಹಿಂದೆ ನರೇಂದ್ರ ಮೋದಿ ಹೇಳಿದ್ದೂ ತಪ್ಪಾಗುತ್ತದೆ ಅಲ್ಲವೇ ಎಂದು ಕೆಲ ನೆಟ್ಟಿಗರು ಬಿಜೆಪಿ ಮುಖಂಡರ ಕಾಲೆಳೆದಿದ್ದಾರೆ.

key words : rape-in-india-rape-capital-delhi-modi-rahul