“ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ಯಾರು ಯಾರನ್ನು ಸಿಲುಕಿಸಲು ಆಗುವುದಿಲ್ಲ” : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

kannada t-shirts

ಬೆಂಗಳೂರು,ಮಾರ್ಚ್,14,2021(www.justkannada.in) : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ಯಾರು ಯಾರನ್ನು ಸಿಲಿಕಿಸಲು ಆಗುವುದಿಲ್ಲ. ಕಾನೂನು ಯಾರ ಪರವಲ್ಲ. ಪ್ರಕರಣ ಸಂಬಂಧ ತನಿಖೆಯಾಗಬೇಕು. ಪೊಲೀಸರೇ ಅಂತಿಮ ತೀರ್ಮಾನ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.jkಡಿ.ಕೆ.ಶಿವಕುಮಾರ್ ಸಿ.ಡಿ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಲಾಗುತ್ತಿದೆ ಎಂಬ ಹೇಳಿಕೆ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಯಾರು ಯಾರನ್ನೂ ಸಿಲಿಕಿಸಲು ಆಗುವುದಿಲ್ಲ. ಪೊಲೀಸ್ ತನಿಖೆಯಾಗಬೇಕು. ಸತ್ಯಾಂಶ ಹೊರಬರಬೇಕು. ನಾನು ಪದೇ ಪದೇ ಹೇಳೋದು ಅದನ್ನೇ ಎಂದಿದ್ದಾರೆ.

ತನಿಖೆಯಾಗಿ ಸತ್ಯಾಂಶ ಹೊರ ಬಂದೇ ಬರುತ್ತದೆ

ರಮೇಶ್ ಜಾರಕಿಹೊಳಿ ಈಗಾಗಲೇ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ತನಿಖೆಯಾಗಿ ಸತ್ಯಾಂಶ ಹೊರ ಬಂದೇ ಬರುತ್ತದೆ. ಅಲ್ಲಿಯವರೆಗೆ  ಕಾದು ನೋಡೋಣ, ಪೊಲೀಸರೇ ಇದಕ್ಕೆ ಪರಿಹಾರ ಹೇಳಬೇಕು. ನನಗೆ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ತಕ್ಷಣಕ್ಕೆ ಏನೂ ಹೇಳುವುದಕ್ಕೆ ಆಗುವುದಿಲ್ಲ ಎಂದರು.

ಯುವತಿಗೆ ಅನ್ಯಾಯವಾಗಿದ್ದರೆ ವೇದಿಕೆಯಿದೆ

Ramesh Zaraki HollyCD case-Who's who-get into-Will not-KPCC President-Satish Zarakihulli 

ಯುವತಿ ಹೇಳಿಕೆ ನೀಡಿದ್ದಾರೆ. ಲೀಗಲ್ ಆಗಿ ಮುಂದೆ ಬರಬೇಕಲ್ಲ?, ಆ ಯುವತಿಗೆ ಅನ್ಯಾಯವಾಗಿದ್ದರೆ ವೇದಿಕೆಯಿದೆ. ಯುವತಿ ಹೇಳಿಕೆ ಬಳಿಕ ಪೊಲೀಸರ ಪಾತ್ರ ಬಹಳ ದೊಡ್ಡದಿದೆ. ರಾಜಕೀಯ ಷಡ್ಯಂತ್ರದ ಬಗ್ಗೆ ನನಗೇನೂ ಗೊತ್ತಿಲ್ಲ. ಈಗ ರಮೇಶ್ ಜಾರಕಿಹೊಳಿ ತಮ್ಮನ್ನು ಬ್ಲಾಕ್‍ಮೇಲ್ ಮಾಡಿದ್ದಾಗಿ ಹೇಳಿದ್ದಾರೆ. ಯುವತಿಗೆ ಏನು ಅನ್ಯಾಯವಾಗಿದೆ ಎಂದು ಮುಂದೆ ಬಂದು ಹೇಳಬೇಕು. ಪೊಲೀಸರ ತನಿಖೆ ಬಳಿಕವಷ್ಟೇ ಎಲ್ಲಾ ಸತ್ಯಾಂಶ ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.

key words : Ramesh Zaraki HollyCD case-Who’s who-get into-Will not-KPCC President-Satish Zarakihulli

website developers in mysore