ರಮೇಶ್ ಜಾರಕಿಹೊಳಿ ಸಿಡಿ  ಪ್ರಕರಣ: ಯುವತಿಯಿಂದ ಮತ್ತೊಂದು ವಿಡಿಯೋ ರಿಲೀಸ್…

Promotion

ಬೆಂಗಳೂರು,ಮಾರ್ಚ್,25,2021(www.justkannada.in): ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ  ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿನ  ಯುವತಿ ಮತ್ತೊಂದು ವಿಡಿಯೋ ಮಾಡಿ  ಬಿಡುಗಡೆ ಮಾಡಿದ್ದಾರೆ.jk

ನನಗೆ ನನ್ನ ತಂದೆ ತಾಯಿಯ ಸುರಕ್ಷತೆಯೇ ಮುಖ್ಯ. ನನ್ನ ತಂದೆ ತಾಯಿಗೆ ರಕ್ಷಣೆ ಕೊಡಬೇಕು.  ನನ್ನ ತಂದೆ ತಾಯಿ ಸ್ವಚ್ಛೆಯಿಂದ ದೂರು ಕೊಟ್ಟಿಲ್ಲ. ಅವರ ಸುರಕ್ಷತೆ ಬಗ್ಗೆ ನನಗೆ ನಂಬಿಕೆ ಬಂದರೇ ಆಗ ನಾನು ಎಸ್ ಐಟಿ ಮುಂದೆ ಹಾಜರಾಗುವೆ . ನಾನು ಏನು ಹೇಳಿಕೆ ನೀಡಬೇಕೋ ಅದನ್ನ ನೀಡುತ್ತೇನೆ ಎಂದು ವಿಡಿಯೋದಲ್ಲಿ ಯುವತಿ ತಿಳಿಸಿದ್ದಾರೆ.

ಹಾಗೆಯೇ ಮಹಿಳಾ ಸಂಘಟನೆಗಳು ಸಿದ್ದರಾಮಯ್ಯ,  ರಮೇಶ್ ಕುಮಾರ್ ಡಿಕೆ ಶಿವಕುಮಾರ್ ರಲ್ಲಿ  ಕೇಳಿಕೊಳ್ಳುತ್ತೇನೆ.   ಮಾರ್ಚ್ 12 ರಂದೇ ನಗರ ಪೊಲೀಸ್ ಆಯುಕ್ತರು, ಎಸ್ ಐಟಿಗೆ ವಿಡಿಯೋ ಕಳಿಸಿದ್ದೆ.  ಆದರೆ ನಾನು ವಿಡಿಯೋ ಕಳಿಸಿದ್ದ ದಿನ ವಿಡಿಯೋ ಬಿಡುಗಡೆಯಾಗಲಿಲ್ಲ. ಮಾರ್ಚ್ 13 ರಂದು ರಮೇಶ್ ಜಾರಕಿಹೊಳಿ ದೂರು ನೀಡಿದ್ದಾರೆ. ದೂರು ನೀಡಿದ ಅರ್ಧ ಗಂಟೆ ಬಳಿಕ ವಿಡಿಯೋ ರಿಲೀಸ್ ಆಗಿದೆ. ಹೀಗಾಗಿ ನನಗೆ ಏನಾಗುತ್ತಿದೆಯೋ ಗೊತ್ತಿಲ್ಲ. ಎಸ್ ಐಟಿ ಯಾರ ಪರವಾಗಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದು ಯುವತಿ ವಿಡಿಯೋದಲ್ಲಿ ತಿಳಿಸಿದ್ದಾರೆ.ramesh-jarakiholi-cd-case-another-video-release-young-woman

ನಮ್ಮ ಅಪ್ಪ ಅಮ್ಮ ಸ್ವಇಚ್ಚೆಯಿಂದ ದೂರು ನೀಡಿಲ್ಲ. ನಾನು ತಪ್ಪು ಮಾಡಿಲ್ಲ ಎಂದು ನಮ್ಮ ತಂದೆ ತಾಯಿಗೆ ಗೊತ್ತಿದೆ ಎಂದು ಯುವತಿ ವಿಡಿಯೋದಲ್ಲಿ ಹೇಳಿದ್ದಾರೆ.

Key words: Ramesh jarakiholi -CD –case- Another video -release – young woman.