ಬೆರಳತುದಿಯಲ್ಲಿ ಟೆಂಡರ್ ಜಾಹೀರಾತು ಮಾಹಿತಿ: ರಾಮನಗರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತೊಂದು ಉಪಕ್ರಮ

kannada t-shirts

ರಾಮನಗರ ಮೇ 08, 2019 (www.justkannada.in news ) ವಿವಿಧ ಇಲಾಖೆಗಳು ಅನುಷ್ಠಾನಗೊಳಿಸುವ ಕಾಮಗಾರಿಗಳು, ಹರಾಜು, ಸರಕು ಸೇವೆ, ಖರೀದಿ, ಬಾಹ್ಯ ಮೂಲಕ ಗುತ್ತಿಗೆ ಆಧಾರದ ಸೇವೆಗಳನ್ನು ಕುರಿತ ಟೆಂಡರ್ ಹಾಗೂ ವರ್ಗೀಕೃತ ಜಾಹೀರಾತು ಮಾಹಿತಿಯನ್ನು ಮತ್ತಷ್ಟು ಪಾರದರ್ಶಕವಾಗಿಸಲು ರಾಮನಗರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತೊಂದು ಉಪಕ್ರಮಕ್ಕೆ ಮುಂದಾಗಿದೆ.

ಪತ್ರಿಕೆಗಳಿಗೆ ನೀಡುವ ಟೆಂಡರ್, ಸರಕು ಸೇವೆ, ಜಾಹೀರಾತು ಮಾಹಿತಿಯನ್ನು ರಾಮನಗರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬ್ಲಾಗ್ www.varthabhavanramanagar.blogspot.com ಮೂಲಕ ಪ್ರಕಟಿಸಿ ಸಾರ್ವಜನಿಕರು, ಗುತ್ತಿಗೆದಾರರು ಹಾಗೂ ಸೇವೆ ಒದಗಿಸುವ ಸಂಸ್ಥೆಗಳಿಗೆ ಮತ್ತಷ್ಟು ಅನುಕೂಲ ಕಲ್ಪಿಸಲು ಕ್ರಮವಹಿಸಿದೆ.

ಸರ್ಕಾರದ ಯಾವುದೇ ಇಲಾಖೆ, ಪಂಚಾಯತ್ ರಾಜ್ ಸಂಸ್ಥೆ, ನಗರಪಾಲಿಕೆ, ಸ್ಥಳೀಯ ಸಂಸ್ಥೆಗಳು, ಪ್ರಾಧಿಕಾರಗಳು, ನಿಗಮ ಮಂಡಳಿಗಳು, ಸಹಾಯಕ ಸಂಸ್ಥೆಗಳು ಅನುಷ್ಠಾನಗೊಳಿಸುವ ಕಾಮಗಾರಿ ಹಾಗೂ ಸರಕು ಸೇವೆಗಳ ಟೆಂಡರ್ ಜಾಹೀರಾತುಗಳನ್ನು ದಿನಪತ್ರಿಕೆಗಳಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕವೇ ನೀಡಬೇಕಿದೆ. ಈ ರೀತಿ ನೀಡಲಾಗುವ ಜಾಹೀರಾತುಗಳು ಪತ್ರಿಕೆಗಳ ಮೂಲಕ ಪ್ರಚಾರ ಮಾಡಲಾಗುತ್ತಿದ್ದರೂ ಜಾಲತಾಣದಲ್ಲಿ ದೊರೆಯುತ್ತಿರಲಿಲ್ಲ.
ರಾಮನಗರ ಜಿಲ್ಲಾ ವಾತರ್ಾ ಇಲಾಖೆ ಬ್ಲಾಗ್ನಲ್ಲಿ ಇನ್ನು ಮುಂದೆ ಎಲ್ಲಾ ಟೆಂಡರ್ ಜಾಹೀರಾತು ಪ್ರಕಟಣೆಗಳನ್ನು ಪ್ರಕಟಿಸುವುದರ ಜೊತೆಗೆ ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ಸುಲಭವಾಗಿ ಮಾಹಿತಿ ದೊರಕಲು ಯಾವ ಪತ್ರಿಕೆ ಈ ಜಾಹೀರಾತು ಪ್ರಕಟಿಸಲಿದೆ ಎಂಬ ಮಾಹಿತಿಯನ್ನು ಹಾಕಲಾಗುವುದು.
1 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳ ವರೆಗಿನ ಕಾಮಗಾರಿ ವ್ಯಾಪ್ತಿ ಪ್ರದೇಶದಲ್ಲಿನ ಎರಡು ಜಿಲ್ಲಾ ದಿನಪತ್ರಿಕೆಗಳು ಮತ್ತು ಮೂಲ ಜಿಲ್ಲೆಯಲ್ಲಿ ಮುದ್ರಣವಾಗಿ ಪ್ರಕಟಗೊಳ್ಳುವ ಒಂದು ಪ್ರಾದೇಶಿಕ ದಿನಪತ್ರಿಕೆಗೆ ಸರದಿಯನುಸಾರ ಪ್ರಕಟಿಸಲಾಗುವುದು.
1 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳವರೆಗಿನ ಸರಕು ಖರೀದಿ ಬಾಹ್ಯಮೂಲದ ಗುತ್ತಿಗೆ ಆಧಾರಿತ ಸೇವೆಗಳು, ವಿಶೇಷ ಅಧಿಸೂಚನೆಗಳು, ನೌಕರರ ನೇಮಕಾತಿ, ಶಿಸ್ತು ಪ್ರಕರಣದ ವಿಷಯಗಳನ್ನು ಕಾಮಗಾರಿ ವ್ಯಾಪ್ತಿ ಪ್ರದೇಶದಲ್ಲಿನ ಒಂದು ಜಿಲ್ಲಾ ದಿನಪತ್ರಿಕೆ, ಮೂಲ ಜಿಲ್ಲೆಯಲ್ಲಿ ಮುದ್ರಣವಾಗಿ ಪ್ರಕಟಗೊಳ್ಳುವ ಒಂದು ಪ್ರಾದೇಶಿಕ ದಿನಪತ್ರಿಕೆ ಸರದಿಯನುಸಾರ ಹಾಗೂ ರಾಜ್ಯ ಮಟ್ಟದ ಒಂದು ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
10 ಲಕ್ಷ ರೂ.ಗಳಿಂದ 30 ಲಕ್ಷ ರೂ.ಗಳ ವರೆಗಿನ ಒಂದು ನಿರ್ದಿಷ್ಟ ಕಾಮಗಾರಿ/ ಸರಕು/ ಸೇವೆ ಖರೀದಿಯನ್ನು ಕಾಮಗಾರಿ ವ್ಯಾಪ್ತಿ ಪ್ರದೇಶದಲ್ಲಿನ ಎರಡು ಜಿಲ್ಲಾ ಮಟ್ಟದ ದಿನಪತ್ರಿಕೆಗಳು ಹಾಗೂ ಎರಡು ಪ್ರಾದೇಶಿಕ ದಿನಪತ್ರಿಕೆಗಳು. ಈ ಪೈಕಿ ಮೂಲ ಜಿಲ್ಲೆಯಲ್ಲಿ ಮುದ್ರಣವಾಗಿ ಪ್ರಕಟಗೊಳ್ಳುವ ಒಂದು ಪ್ರಾದೇಶಿಕ ದಿನಪತ್ರಿಕೆಗೆ ಕಡ್ಡಾಯವಾಗಿ ಸರದಿಯನುಸಾರ ಹಾಗೂ ರಾಜ್ಯ ಮಟ್ಟದ ಒಂದು ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
30 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗಳ ವರೆಗಿನ ಕಾಮಗಾರಿ ವ್ಯಾಪ್ತಿ ಪ್ರದೇಶದಲ್ಲಿ ಪ್ರಸಾರ ಹೊಂದಿರುವ ಒಂದು ಜಿಲ್ಲಾ ಮಟ್ಟದ ದಿನಪತ್ರಿಕೆ ಮತ್ತು ಎರಡು ಪ್ರಾದೇಶಿಕ ಪತ್ರಿಕೆಗಳು. ಆ ಪೈಕಿ ಮೂಲ ಜಿಲ್ಲೆಯಲ್ಲಿ ಪ್ರಕಟಗೊಳ್ಳುವ ಒಂದು ಪ್ರಾದೇಶಿಕ ದಿನಪತ್ರಿಕೆಗೆ ಕಡ್ಡಾಯವಾಗಿ ಸರದಿಯನುಸಾರ ಮತ್ತು ಕಾಮಗಾರಿ ವ್ಯಾಪ್ತಿಯಲ್ಲಿ ಪ್ರತ್ಯೇಕ ಆವೃತ್ತಿ ಹೊಂದಿರುವ ರಾಜ್ಯ ಮಟ್ಟದ ಎರಡು ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು.
ಒಂದೇ ಟೆಂಡರ್ನಲ್ಲಿ 50 ಲಕ್ಷ ರೂ.ಗಳ ಮೇಲ್ಪಟ್ಟ ಮೌಲ್ಯದ ಎಷ್ಟೇ ಕಾಮಗಾರಿಗಳು ಇದ್ದರು ಸಹ ರಾಜ್ಯ ಮಟ್ಟದ 02 ಕನ್ನಡ ದಿನಪತ್ರಿಕೆಗಳಿಗೆ ಮತ್ತು 01 ಆಂಗ್ಲ ದಿನಪತ್ರಿಕೆಗೆ ಬಿಡುಗಡೆ ಮಾಡಲಾಗುವುದು.
ಈ ಎಲ್ಲಾ ಮಾಹಿತಿ ಇನ್ನು ಮುಂದೆ ರಾಮನಗರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬ್ಲಾಗ್ನಲ್ಲಿ ದೊರೆಯಲಿದೆ. ಈ ಮಾಹಿತಿಯನ್ನು ಕಂಪ್ಯೂಟರ್ ಅಥವಾ ಮೊಬೈಲ್ನಲ್ಲಿ ಬೆರಳತುದಿಯಲ್ಲೇ ನೋಡಬಹುದಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಎಸ್. ಶಂಕರಪ್ಪ ಅವರು ತಿಳಿಸಿದ್ದಾರೆ.

 

ramanagar-information-publicity-department-tendar-advertisment-online

 

website developers in mysore