ಪೋಲಿ ಪುಂಡರಿಂದ ಬೀದಿ ಬೀದಿಗಳಲ್ಲಿ ಹಣ ಸಂಗ್ರಹ: ದೇಣಿಗೆ ಸಂಗ್ರಹಿಸಿದ ಬಗ್ಗೆ ಯಾರಾದ್ರೂ ಲೆಕ್ಕ ಕೊಟ್ಟಿದ್ದಾರಾ..?- ಹೆಚ್,ಡಿ ಕುಮಾರಸ್ವಾಮಿ ಕಿಡಿ…

ಬೆಂಗಳೂರು,ಫೆಬ್ರವರಿ,17,2021(www.justkannada.in): ಶ್ರೀರಾಮ , ಧರ್ಮದ ಹೆಸರಿನಲ್ಲಿ ನಾವು ರಾಜಕಾರಣ ಮಾಢಿಲ್ಲ.  ರಾಮಮಂದಿರ ವಿಚಾರವಾಗಿ ದುರ್ಬಳಕೆಯಾಗುತ್ತಿದೆ. .   ಕೆಲವರು ಹಣವನ್ನ ದುರ್ಬಳಕೆ ಮಾಡುತ್ತಿದ್ದಾರೆ. ಪೋಲಿ ಪುಂಡರಿಂದ ಬೀದಿ ಬೀದಿಗಳಲ್ಲಿ ಹಣ ಸಂಗ್ರಹ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.jk

ರಾಮಮಂದಿರಕ್ಕೆ ದೇಣಿಗೆ ಸಂಗ್ರಹ ವಿಚಾರ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಶ್ರೀರಾಮ ,ಧರ್ಮದ ಹೆಸರಿನಲ್ಲಿ ನಾನು ಭ್ರಷ್ಟಾಚಾರ ಮಾಡಿಲ್ಲ.  ರಾಮಮಂದಿರ ವಿಚಾರವಾಗಿ ಕೆಲವರು ಹಣವನ್ನ ದುರ್ಬಳಕೆ ಮಾಡುತ್ತಿದ್ದಾರೆ. ದೇಣಿಗೆ ಸಂಗ್ರಹಕ್ಕೆ ಅನುಮತಿ ನೀಡಿದವರು ಯಾರು..? ಜನರನ್ನು ಪ್ರೇರೇಪಿಸಲು ನೀವು ಬ್ಯಾನರ್ ಗಳನ್ನ ಹಾಕಿ ಮನೆಗಳಿಗೆ ಪೋಸ್ಟರ್ ಅಂಟಿಸುತ್ತಿರುವುದೇಕೆ…?  ರಾಮನ ಹೆಸರನ್ನ ಬಳಸಿ ಅವಮಾನ ಮಾಡುತ್ತಿರುವವರು ನೀವು . ರಾಮನ ಹೆಸರನಿನಲ್ಲಿ ಹಿಂದಿನಿಂದಲೂ ರಾಜಕಾರಣ ಮಾಡಿದ್ದೀರಿ. ಪೋಲಿ ಪುಂಡರು ಬೀದಿ ಬೀದಿಗಳಲ್ಲಿ ಹಣ ಸಂಗ್ರಹಿಸುತ್ತಿದಗ್ದಾರೆ. ಸಂಗ್ರಹಿಸಿ ಹಣವನ್ನ ರಾಮಮಂದಿರ ನಿರ್ಮಾಣಕ್ಕೆ ಕೊಡುತ್ತಿದ್ದಾರಾ..? ಎಂದು ಪ್ರಶ್ನಿಸಿದರು.ramamandira- streets –money- collected – former cm H, D Kumaraswamy

ಏನಪ್ಪ ಎಂದು ಪ್ರಶ್ನಿಸಿದರೇ ದೇಶದ ಪ್ರತೀಕ ಎಂದು ನನಗೆ ಬೆದರಿಕೆ ಹಾಕುತ್ತಾರೆ…

ನಾವು ಚಿಲ್ಲರೆ ರಾಜಕಾರಣ ಮಾಢಿದವರಲ್ಲ. ನಾವು ಸ್ವಾಭಿಮಾನದಿಂದ ಬದುಕಿದ್ದೇವೆ. ನಿಮ್ಮ ರೀತಿ ಅಭಿಮಾನ ಶೂನ್ಯರಲ್ಲ. ಬೆಂಕಿ ಹಚ್ಚುವ ಗುಣ ನಿಮ್ಮದು. ಬೆಂಕಿ ಆರಿಸುವ ಸಂಸ್ಕೃತಿ ನಮ್ಮದು. ದಿನಕ್ಕೆ ಮೂರು  ತಂಡ ದೇಣಿಗೆ ಸಂಗ್ರಹಿಸಲು ನಮ್ಮ ಮನೆಗೆ ಬರ್ತಾರೆ. ಆ ವೇಳೆ ಏನಪ್ಪ ಎಂದು ಪ್ರಶ್ನಿಸಿದರೇ ದೇಶದ ಪ್ರತೀಕ ಎಂದು ನನಗೆ ಬೆದರಿಕೆ ಹಾಕುತ್ತಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ಹರಿಹಾಯ್ದರು.

ದೇಣಿಗೆ ಸಂಗ್ರಹಿಸಿದ ಬಗ್ಗೆ ಯಾರಾದ್ರೂ ಲೆಕ್ಕ ಕೊಟ್ಟಿದ್ದಾರಾ..?  

ದೇಣಿಗೆ ಸಂಗ್ರಹಿಸಿದ ಬಗ್ಗೆ ಯಾರಾದ್ರೂ ಲೆಕ್ಕ ಕೊಟ್ಟಿದ್ದಾರಾ..? ಎಂದು ಪ್ರಶ್ನಿಸಿದ ಹೆಚ್.ಡಿ ಕುಮಾರಸ್ವಾಮಿ,  ದೇಣಿಗೆ ಸಂಗ್ರಹಿಸಲು ಗೈಡ್ ಲೈನ್ಸ್ ಏನಾದ್ರೂ ಇದೆಯಾ…? ರಾಮನ ಹೆಸರು ದುರ್ಬಳಕೆಯಾಗಬಾರದು. ದೇಶದಲ್ಲಿ ಮುಕ್ತವಾಗಿ ಮಾತನಾಡುವ ಸ್ವತಂತ್ರವೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇಣಿಗೆ ಸಂಗ್ರಹಕ್ಕೆ ನನ್ನ ವಿರೋಧವಿಲ್ಲ…..

ದೇಣಿಗೆ ಸಂಗ್ರಹಕ್ಕೆ ನನ್ನ ವಿರೋಧವಿಲ್ಲ. ನಮ್ಮ ಪಕ್ಷದವರೂ ದೇಣಿಗೆ ನೀಡಿದ್ದಾರೆ. ಪಾರದರ್ಶಕವಾಗಿ ಎಷ್ಟು ದೇಣಿಗೆಯನ್ನಾದರೂ ಸಂಗ್ರಹಿಸಲಿ. ಸರಿಯಾದವರು ಬಂದು ದೇಣಿಗೆ ಕೇಳಿದರೇ ಒಂದು ಸಾರಿ ಅಲ್ಲ ಎರಡು ಬಾರಿ ಹಣ ನೀಡುತ್ತೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.

Key words: ramamandira- streets –money- collected – former cm H, D Kumaraswamy