ರಾಮನವಮಿ ಸಂಭ್ರಮ: ಮೈಸೂರಿನಲ್ಲಿ ಹಿಂದೂ –ಮುಸ್ಲಿಂ ಭಾವೈಕ್ಯತೆಯಿಂದ ಪಾನಕ, ಮಜ್ಜಿಗೆ ವಿತರಣೆ.

ಮೈಸೂರು,ಮಾರ್ಚ್,30,2023(www.justkannada.in):  ಇಂದು ರಾವನವಮಿ ಹಬ್ಬದ ಸಂಭ್ರಮವಾಗಿದ್ದು ಸಾಂಸ್ಕೃತಿಕ ನಗರಿ ಮೈಸೂರು ಹಿಂದೂ –ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಯಿತು.

ಪಾನಕ ಮಜ್ಜಿಗೆ ಹಂಚುವ ಮೂಲಕ  ಹಿಂದೂ ಮತ್ತು ಮುಸ್ಲೀಂರು  ಭಾವೈಕ್ಯತೆಯಿಂದ ಶ್ರೀ ರಾಮನವಮಿ ಆಚರಣೆ ಮಾಡಿದರು. ನಗರದ ನಾರಾಯಣ್ ಶಾಸ್ತ್ರಿ ರಸ್ತೆಯಲ್ಲಿರುವ ಮೈಸೂರು ಜಿಲ್ಲಾ ಪೆಂಡಾಲ್ ಮಾಲೀಕರ ಸಂಘ ಆಯೋಜಿಸಿದ ರಾಮನವಮಿ ಪ್ರಯುಕ್ತ ಹಿಂದೂ ಮುಸಲ್ಮಾನ್ ಭಾವೈಕ್ಯತೆಯಿಂದ ಶ್ರೀ ರಾಮಚಂದ್ರನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆನಂತರ ಭಕ್ತಾದಿಗಳಿಗೆ ಪಾನಕ ಮಜ್ಜಿಗೆ ಕೋಸಂಬರಿ ವಿತರಿಸಿದರು.

ಮುಸಲ್ಮಾನ್ ಬಾಂಧವರು ಭಾಗವಹಿಸಿದ್ದಕ್ಕೆ  ಹಿಂದೂ ಯುವಕರು ಸಂತಸ ವ್ಯಕ್ತಪಡಿಸಿದರು. ವಿಶೇಷವಾಗಿ ಶ್ರೀ ರಾಮನ ವೇಷ ಧರಿಸಿ ಬಂದ ಸಿದ್ದಾರ್ಥ ಲೇಔಟ್ ನಿವಾಸಿ ಜೀವನ್ ಅವರು ವಿಶೇಷ ಗಮನ ಸೆಳೆದರು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಪೆಂಡಾಲ್ ಮಾಲೀಕರ ಸಂಘ ಅಧ್ಯಕ್ಷ  ಶಿವಕುಮಾರ್, ಅಧ್ಯಕ್ಷರಾದ ತಾಜ್ ಮಹಮ್ಮದ್, ಲಿಂಗಪ್ಪ, ರಾಜ್ಯ ಉಪಾಧ್ಯಕ್ಷರಾದ ಅಬ್ದುಲ್ ರೆಹಮಾನ್, ವಾಸಿಂ, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಲೋಹಿತ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Key words: Rama Navami-celebration- Hindu-Muslim -spirit – Mysore.