ಪಿಪಿಇ ಕಿಟ್ ಧರಿಸಿ ಏರ್ ಪೋರ್ಟ್ ಗೆ ಬಂದ ರಾಕುಲ್ !

Promotion

ಮುಂಬೈ , ಜೂನ್ 12, 2020 (www.justkannada.in): ಕೊರೊನಾ ಆತಂಕದ ಹಿನ್ನೆಲೆ ಮನೆಯಿಂದಲೇ ರಾಕುಲ್ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಧರಿಸಿ ವಿಮಾನ ನಿಲ್ದಾಣಕ್ಕೆ ಬಂದ ದೃಶ್ಯಗಳು ವೈರಲ್ ಆಗಿವೆ.

ರಾಕುಲ್ ಪ್ರೀತ್ ಸಿಂಗ್ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಧರಿಸಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಗಮನ ಸೆಳೆದರು. ಜತೆಗೆ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಬಾಲಿವುಡ್ ತಾರೆಯರು ಸಹ ದಿಢೀರ್ ಲಾಕ್‍ಡೌನ್ ಘೋಷಣೆ ಆಗಿದ್ದರಿಂದ ಇದ್ದ ಸ್ಥಳದಲ್ಲಿಯೇ ಲಾಕ್ ಆಗಿದ್ದರು. ವಿಮಾನ ಸಂಚಾರಕ್ಕೆ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಅಂದಹಾಗೆ ರಾಕುಲ್ ಮುಂಬೈನಿಂದ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.