ರಶ್ಮಿಕಾ ದೊಡ್ಡ ಕನಸುಗಾರ್ತಿ, ಆಕೆಯ ಎಲ್ಲ ಕನಸು ನನಸಾಗಲಿ ಎಂದ ರಕ್ಷಿತ್ ಶೆಟ್ಟಿ !

Promotion

ಬೆಂಗಳೂರು, ಡಿಸೆಂಬರ್ 2, 2019 (www.justkannada.in): ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿ ತಮ್ಮ ಬ್ರೇಕ್ ಅಪ್, ರಶ್ಮಿಕಾ ಕುರಿತು ಮಾತನಾಡಿದ್ದಾರೆ.

ರಶ್ಮಿಕಾ ದೊಡ್ಡ ಕನಸುಗಾರ್ತಿ. ಅವರ ಹಿನ್ನೆಲೆ ನನಗೆ ಗೊತ್ತಿದೆ. ಹಾಗಾಗಿ ಆಕೆಯ ಕನಸು ಎಲ್ಲಿಂದ ಬರುತ್ತೆ ಎಂದು ಗೊತ್ತಿದೆ. ಈ ಬಾರಿ ಸಂತ ಕ್ಲಾಸ್ ಎಲ್ಲಾ ಕನಸುಗಳನ್ನು ಈಡೇರಿಸಲಿ ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

ಬ್ರೇಕ್ ಅಪ್ ಬಳಿಕ ನಿಮ್ಮ ಜೀವನದಲ್ಲಿ ಯಾವ ಬದಲಾವಣೆಯಾಗಿದೆ ಎಂಬ ಪ್ರಶ್ನೆಗೆ, ಜೀವನದಲ್ಲಿ ಬಂದಿದ್ದಲ್ಲೆವನ್ನು ಹಾಗೆ ಸ್ವೀಕರಿಸಿ ಮುನ್ನಡೆದಿದ್ದೇನೆ. ಜೀವನ ಎಂಬುದು ಎಲ್ಲಕ್ಕಿಂತ ದೊಡ್ಡದು. ಇದೆಲ್ಲವು ಜೀವನದಲ್ಲಿ ಬರುವ ಸಣ್ಣ ವಿಚಾರಗಳಷ್ಟೇ. ಬದುಕಲು ಇದಕ್ಕಿಂತ ದೊಡ್ಡ ಕಾರಣಗಳಿರುತ್ತವೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.