ತಮಗೆ ದೊರೆತ ರಾಜ್ಯೋತ್ಸವ ಪ್ರಶಸ್ತಿಯ ಒಂದು ಲಕ್ಷ ರೂ. ಹಣವನ್ನು ಕೆಯುಡಬ್ಲ್ಯೂಜೆ ದತ್ತಿನಿಧಿಗೆ ಹಸ್ತಾಂತರಿಸಿದ ಟಿ.ವೆಂಕಟೇಶ್

Promotion

ಬೆಂಗಳೂರು,ಡಿಸೆಂಬರ್,8,2020(www.justkannada.in): ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಾಧ್ಯಮ ಕ್ಷೇತ್ರದ ಹಿರಿಯರು ಹಾಗೂ ಈ ಸಂಜೆ ಪತ್ರಿಕೆ ಸಂಪಾದಕರಾದ ಟಿ.ವೆಂಕಟೇಶ್ ಅವರು, ತಮಗೆ ದೊರೆತ ರಾಜ್ಯೋತ್ಸವ ಪ್ರಶಸ್ತಿಯ ಬಾಬ್ತು 1 ಲಕ್ಷ (ಒಂದು ಲಕ್ಷ) ಡಿಡಿ ಯನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ದತ್ತಿ ನಿಧಿಗೆ ಇಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರ ಮೂಲಕ ಹಸ್ತಾಂತರ ಮಾಡಿದ್ದಾರೆ.logo-justkannada-mysore

ಕೆಯುಡಬ್ಲ್ಯೂಜೆ ದತ್ತಿ ನಿಧಿಯಲ್ಲಿ ಒಂದು ಲಕ್ಷ ಹಣವನ್ನು ಠೇವಣಿಯಾಗಿರಿಸಿ, ಪ್ರತಿ ವರ್ಷದ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಈ ಸಂಜೆ ಪತ್ರಿಕೆ ಹೆಸರಿನಲ್ಲಿ ಪ್ರತಿಭಾನ್ವಿತ  ಗ್ರಾಮೀಣ ಭಾಗದ ಪತ್ರಕರ್ತರೊಬ್ಬರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.rajyotsava-award-rs-1-lakh-journalist-t-venkatesh-kuwj-charity

ಅಭಿನಂದನೆ:

ಕೆಯುಡಬ್ಲ್ಯೂಜೆ ಮೇಲೆ ಅಭಿಮಾನವಿರಿಸಿ ತಮಗೆ ದೊರೆತ ರಾಜ್ಯೋತ್ಸವ ಪ್ರಶಸ್ತಿಯ ಒಂದು ಲಕ್ಷ ಹಣವನ್ನು ಪ್ರಶಸ್ತಿ ದತ್ತಿ ನಿಧಿಗೆ ಸಮರ್ಪಣೆ ಮಾಡಲು ನಿರ್ಧರಿಸಿರುವುದನ್ನು ನಾಡಿನ ಪತ್ರಕರ್ತರ ಪರವಾಗಿ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಅಭಿನಂದಿಸಿದ್ದಾರೆ.

Key words: Rajyotsava award – Rs 1 lakh-journalist- T. Venkatesh KUWJ- charity