ರಾಜ್ಯಸಭೆ ಚುನಾವಣೆ ವಿಚಾರ: ಯಾವುದೇ ಕಾರಣಕ್ಕೂ ಅಭ್ಯರ್ಥಿ ಹಿಂಪಡೆಯಲ್ಲ-ಹೆಚ್.ಡಿಕೆ ಸ್ಪಷ್ಟನೆ.

Promotion

ಬೆಂಗಳೂರು,ಜೂನ್,8,2022(www.justkannada.in):  ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ನಮಗೆ ಜೆಡಿಎಸ್ ಬೆಂಬಲಿಸಲಿ ಎಂದು ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗೆ ಟಾಂಗ್ ನೀಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಯಾವುದೇ ಕಾರಣಕ್ಕೂ ಅಭ್ಯರ್ಥಿ ಹಿಂಪಡೆಯಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ಇವತ್ತಿನಿಂದಲೇ ಹಳೆಯದನ್ನ ಮರೆತು ಬಿಡುತ್ತೇನೆ. ಬಿಜೆಪಿ ಸೋಲಿಸಲು  ಓಪನ್ ಆಫರ್ ಕೊಡ್ಡಿದ್ದೇನೆ. ವೈಷಮ್ಯ ಬಿಡ್ತೇನೆ. ಎಲ್ಲದಕ್ಕೂ ಸಿದ್ಧ. ನಾಳೆ ಮಧ್ಯಾಹ್ನ ಸರಿಯಾದ ತೀರ್ಮಾನ ಆಗುತ್ತೆ ಎಂದು ನುಡಿದರು.

ಜೂನ್ 10 ರಂದು ರಾಜ್ಯಸಭಾ ಚುನಾವಣೆಗೆ ಮತದಾನ ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ. ಈ ಮಧ್ಯೆ ಅಡ್ಡಮತದಾನ ಭೀತಿ ಹಿನ್ನೆಲೆಯಲ್ಲಿ ಶಾಸಕರನ್ನ ರೆಸಾರ್ಟ್ ಶಿಫ್ಟ್ ಮಾಡಲು ಹೆಚ್.ಡಿಕೆ ಪ್ಲಾನ್ ರೂಪಿಸಿದ್ದು, ಎಲ್ಲ ಶಾಸಕರು ರೆಸಾರ್ಟ್ ಗೆ ಬರುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

Key words: RajyaSabha-election –Candidate no- withdrawal –HD Kumaraswamy