ರಾಜ್ಯಸಭೆ ಚುನಾವಣೆಗೆ ಸ್ಪರ್ಧೆ: ಕಾಂಗ್ರೆಸ್ ಸಂಪೂರ್ಣ ಬೆಂಬಲ ಕೋಡೋದಾಗಿ ಸೋನಿಯಾ ಗಾಂಧಿ ಹೇಳಿದ್ರು- ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ…

kannada t-shirts

ಬೆಂಗಳೂರು,ಜೂ,9,2020(www.justkannada.in): ಎಐಸಿಸಿ ಅಧ್ಯಕ್ಷೆ ಸೋನೀಯಾ ಗಾಂಧಿ ಕರೆ ಮಾಡಿ ಮಾತನಾಡಿದ್ದೆ.  ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಯಾಗಿ ನಾನು ಮಂಗಳವಾರ ನಾಮಿನೇಷನ್ ಹಾಕ್ತೀನಿ ಎಂದಿದ್ದೆ. ಅದಕ್ಕೆ  ಅವರು ತುಂಬಾ ಸಂತೋಷಪಟ್ಟರುಕಾಂಗ್ರೆಸ್ ಸಂಪೂರ್ಣ ಬೆಂಬಲ ಕೊಡೋದಾಗಿ ಹೇಳಿದ್ರು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತಿಳಿಸಿದರು.Rajya Sabha –elections- Sonia Gandhi -Congress – supportive- former Prime Minister -HD Deve Gowda

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್‌.ಡಿ ದೇವೇಗೌಡ, 16ನೇ ಲೋಕಸಭೆ ಮುಕ್ತಾಯವಾದ ದಿನ ನಾನು ಮತ್ತೊಮ್ಮೆ ಲೋಕಸಭೆಗೆ ನಿಲ್ಲಲ್ಲ ಎಂದು ಬಹಿರಂಗವಾಗಿ ಘೋಷಣೆ ಮಾಡಿದ್ದೆ. ನಾನು ಮಾತು ಮುಗಿಸುತ್ತಿದ್ದಂತೆ ಅವತ್ತೆ ಹಲವು ನಾಯಕರು ವಾಪಸ್ ತೆಗೆದುಕೊಳ್ಳುವಂತೆ ಹೇಳಿದ್ರು. ಆನಂತರ ಚುನಾವಣೆಯಲ್ಲಿ ನಿಂತು ಸೋತಿದ್ದಾಯ್ತು. ಅದನ್ನ ಯಾರ ಮೇಲೂ ಹೊಣೆ ಹಾಕಲ್ಲ. ಅದು ವಿಧಿಯಾಟ. ಅದಾದ್ಮೇಲೆ ಚುನಾವಣೆಗೆ ನಿಲ್ಲೋದು ಬೇಡ ಅಂತಾ ಇದ್ದೆ. ಆದ್ರೆ ಶಾಸಕಾಂಗ ಪಕ್ಷದಲ್ಲಿ ಎಲ್ಲರೂ ತೀರ್ಮಾನ ಮಾಡಿದ್ರು. ರಾಜ್ಯಸಭೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಇದು ಕುಮಾರಸ್ವಾಮಿ ರೇವಣ್ಣ ಒತ್ತಡ ಅಲ್ಲ. ಎಲ್ಲರ ಒತ್ತಡ ಇತ್ತು ಎಂದು ತಿಳಿಸಿದರು.

ಅಂದು ಸೋನಿಯಾ, ರಾಹುಲ್ ಸೇರಿದಂತೆ ಎಲ್ಲಾ ನಾಯಕರು ಇದ್ದರು. ಮಲ್ಲಿಕಾರ್ಜುನ ಖರ್ಗೆ ಅವರ ಒಂದೇ ಹೆಸರನ್ನ ಸೋನಿಯಾಗಾಂಧಿ ಘೋಷಣೆ ಮಾಡಿದ್ರು. ಲೋಕಸಭೆ ಚುನಾವಣೆಯಲ್ಲಿ ಸೋತ ಮೇಲೆ ಸೋನಿಯಾ ಒಂದು ಮಾತು ಹೇಳಿದ್ರು. ಲೋಕಸಭೆಯಲ್ಲಿ ನಿಮ್ಮನ್ನ ಮಿಸ್ ಮಾಡ್ಕೋಳಿವಿ ಎಂದಿದ್ರು. ರಾಜ್ಯಸಭೆಗೆ ನೀವೇ ನಿಲ್ಲಬೇಕು ಎಂದು ಕುಪೇಂದ್ರ ರೆಡ್ಡಿಗೆ ಹೇಳಿದ್ದೆ. ನಾನು ಯಾರಿಗೂ ಅಪ್ರೋಚ್ ಮಾಡಿರಲಿಲ್ಲ ಎಂದು ಹೆಚ್.ಡಿಡಿ ತಿಳಿಸಿದರು.

ಭಾನುವಾರ ಸಂಜೆ ನಾನು ಮೊದಲಬಾರಿಗೆ ಸೋನಿಯಾ ಗಾಂಧಿ ಅವರಿಗೆ ಕಾಲ್ ಮಾತನಾಡಿದ್ದೆ. ನಾನು ಮಂಗಳವಾರ ನಾಮಿನೇಷನ್ ಹಾಕ್ತೀನಿ ಎಂದಿದ್ದೆ. ಅದಕ್ಕೆ ಅವರು ತುಂಬಾ ಸಂತೋಷಪಟ್ಟರು. ಕಾಂಗ್ರೆಸ್ ಸಂಪೂರ್ಣ ಬೆಂಬಲ ಕೊಡೋದಾಗಿ ಹೇಳಿದ್ರು. ನೀವು ಪಾರ್ಲಿಮೆಂಟ್ ಗೆ ಬರೋದು ಎಲ್ಲರಿಗೂ ಸಂತೋಷದ ವಿಷಯ ಅಂದ್ರು. ಅವರ ಜೊತೆಗೆ ಹಲವು ಎಡಪಕ್ಷದ ನಾಯಕರು ಸಂತಸ ವ್ಯಕ್ತಪಡಿಸಿಸಿದ್ರು ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು.

ನಾನು ಜ್ಯಾತ್ಯಾತೀತ ವ್ಯವಸ್ಥೆಯಲ್ಲಿ ಮೊದಲಿಂದಲೂ ಹೋರಾಟ ಮಾಡ್ಕೊಂಡು ಬಂದಿದ್ದೇನೆ.  ಹಲವು ಸಲ ಚುನಾವಣೆಯಲ್ಲಿ ಸೋತಿರಬಹುದು. 1999,2019 ರಲ್ಲಿ ಸೋತಿದ್ದೇನೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಸೋತಿದ್ದೇನೆ. 2019 ರಲ್ಲಿ ಸೋತಾಗಲೂ ಮತ್ತೆ ಸ್ಪರ್ಧಿಸಬಾರದು ಅಂದ್ಕೊಂಡಿದ್ದೆ. ವಿರೋಧ ಪಕ್ಷದ ನಾಯಕರ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆದಾಗಲೂ ಹಲವರು ಹೇಳಿದ್ರು. ನೀವು ಮನೆಯಲ್ಲಿ ಸುಮ್ನೆ ಕೂರಬಾರದು ಎಂದು ಒತ್ತಾಯಿಸಿದ್ರು ಎಂದು ಹೆಚ್.ಡಿಡಿ ವಿವರಿಸಿದರು. ರಾಜ್ಯಸಭೆಗೆ ಮಲ್ಲಿಕಾರ್ಜುನ ಖರ್ಗೆ ಹೋಗ್ತಿರೋದು ಒಂದು ಶಕ್ತಿ ಬರುತ್ತದೆ. ಖರ್ಗೆಗೆ ಅಭಿನಂದಿಸುತ್ತೇನೆ ಎಂದು ಹೆಚ್ಡಿಡಿ ತಿಳಿಸಿದರು.

ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ದೇವೇಗೌಡರು, ಬಿಜೆಪಿಯವರು ಎರಡೇ ಅಭ್ಯರ್ಥಿಗಳನ್ನ ಹಾಕಿದ್ದಾರೆ. ಅವಿರೋಧ ಆಯ್ಕೆಗೆ ಬಿಜೆಪಿಯವರು ಕಾರಣ ಆಗ್ತಾರೆ. ಬಿಜೆಪಿಯಲ್ಲಿ ಹಲವು ಹೋರಾಟ ಇದ್ರೂ, ರಾಜ್ಯ ಕಳಿಸಿದ್ದ ಪಟ್ಟಿಯಲ್ಲಿ ಬಿಟ್ಟು ಅಭ್ಯರ್ಥಿಗಳನ್ನ ಆಯ್ಕೆ ಮಾಡಿದ್ದಾರೆ. ಅವಿರೋಧ ಆಯ್ಕೆಗೆ ಎರಡು ರಾಜಕೀಯ ಪಕ್ಷಗಳ ನಿರ್ಣಯ ಆಗಿದೆ. ಬಿಜೆಪಿಯವರನ್ನ ಯಾರನ್ನು ಸಂಪರ್ಕ ಮಾಡಿಲ್ಲ. ನನ್ನ ರಾಜಕೀಯ ಜೀವನವೆಲ್ಲಾ ಜಾತ್ಯಾತೀತವಾಗಿಯೇ ಹೋರಾಟ ಮಾಡ್ಕೊಂಡು ಬಂದಿದ್ದೇನೆ. ಅವಿರೋಧ ಚುನಾವಣೆ ಆಗುವ ಮೂಲಕ ಪ್ರಾದೇಶಿಕ ಪಕ್ಷಕ್ಕೆ ಒಂದು ಅವಕಾಶ ಸಿಕ್ಕಿದೆ. ಜನರ ಸಮಸ್ಯೆಗಳಿಗೆ ಹೋರಾಟ ಮಾಡುತ್ತೇವೆ. ನಮ್ಮ ಪಕ್ಷ ಯಾವುದೇ ದಾಕ್ಷಣ್ಯಕ್ಕೆ ಒಳಗಾಗಿಲ್ಲ. ಜನರ ಸಮಸ್ಯೆಗಳ ಹೋರಾಟ ಮಾಡುತ್ತೇನೆ. ಪಕ್ಷ ಸಂಘಟನೆಯನ್ನೂ ಮಾಡ್ತೇನೆ ಎಂದು ತಿಳಿಸಿದರು.

ರಾಜ್ಯಸಭೆಯಲ್ಲಿ ಮಾತನಾಡಲು ಹೆಚ್ಚಿನ ಅವಕಾಶ ನೀಡುವಂತೆ ಸಭಾಪತಿಗೆ ಕೇಳುತ್ತೇನೆ. ಇದು ನನ್ನ ಕಡೆಯ ಅವಕಾಶವೇನೋ ಗೊತ್ತಿಲ್ಲ ನಂಗೆ. ನಮ್ಮ ಪಕ್ಷ ಹಲವು ಜನಪರ, ಬಡವರ ಪರ ಕೆಲಸ ಮಾಡಿದೆ. ಹೆಚ್.ಡಿ ದೇವೇಗೌಡರು ಜಾತ್ಯಾತೀತ ಹೋರಾಟಕ್ಕೆ ತಿಲಾಂಜಲಿ ಬಿಟ್ರಾ ಎಂದು ಕೆಲವರು ಅಂದುಕೊಳ್ತಿದ್ದಾರೆ. ಜ್ಯಾತ್ಯಾತೀತ ವ್ಯವಸ್ಥೆ ಉಳಿಸಿಕೊಂಡೇ ಹೋರಾಟ ಮಾಡ್ತೇವೆ. ಕೊನೆ ಕ್ಷಣದವರೆಗೂ ಕಾಂಪ್ರಮೈಸ್ ಆಗಲ್ಲ ಎಂದು ಹೆಚ್.ಡಿಡಿ ನುಡಿದರು.

Key words: Rajya Sabha –elections- Sonia Gandhi -Congress – supportive- former Prime Minister -HD Deve Gowda

website developers in mysore