ರಾಜ್ಯಸಭಾ ಚುನಾವಣೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶಾಸಕರಿಂದ ಮತದಾನ..

ಬೆಂಗಳೂರು,ಜೂನ್,10,2022(www.justkannada.in): ಇಂದು ದೇಶದ 15 ರಾಜ್ಯಗಳ 57 ರಾಜ್ಯಸಭಾಸ್ಥಾನಗಳಿಗೆ ಚುನಾವಣೆ ನಡೆಯುತಿದ್ದು, ರಾಜ್ಯದಲ್ಲಿ ನಾಲ್ಕು ಸ್ಥಾನಗಳಿಗೆ ಮತದಾನ ಆರಂಭವಾಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶಾಸಕರು ಆಗಮಿಸಿ ಮತದಾನ ಮಾಡುತ್ತಿದ್ದಾರೆ.

ವಿಧಾನಸೌಧದದ ಕೊಠಡಿ ಸಂಖ್ಯೆ 106 ರಲ್ಲಿ ಮತದಾನ ಶುರುವಾಗಿದ್ದು ಈವರೆಗೆ ಬಿಜೆಪಿ 65 ಮಂದಿ, ಕಾಂಗ್ರೆಸ್ 20 ಮಂದಿ ಜೆಡಿಎಸ್ ನ 7 ಮಂದಿ ಶಾಸಕರು ಮತದಾನ ಮಾಡಿದ್ದಾರೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಸಂಜೆ 5-6 ರವರೆಗೆ ಮತ ಎಣಿಕೆ ನಡೆಯಲಿದೆ.  ನಂತರ ಫಲಿತಾಂಶ ಪ್ರಕಟವಾಗಲಿದೆ.

ರಾಜ್ಯಸಭೆಯ ಒಟ್ಟು 4 ಸ್ಥಾನಗಳ ಪೈಕಿ ಮೂರು ಸ್ಥಾನಗಳ ಗೆಲುವು ಬಹುತೇಕ ನಿಶ್ಚಿತವಾಗಿದ್ದು, ನಾಲ್ಕನೇ ಸ್ಥಾನಕ್ಕಾಗಿ ಮೂರು ಪಕ್ಷಗಳ ಅಭ್ಯರ್ಥಿಗಳು ಪೈಪೋಟಿ ಉಂಟಾಗಲಿದೆ.  ಯಾರು ಗೆಲುವು ಸಾಧಿಸಲಿದ್ದಾರೆ ಎಂಬುದನ್ನು ಇಂದು ಸಂಜೆಯವರೆಗೆ ಕಾಯಬೇಕಾಗಿದೆ.

ಬಿಜೆಪಿಗೆ ಎರಡು, ಕಾಂಗ್ರೆಸ್ ಗೆ ಒಂದು ಸ್ಥಾನದ ಗೆಲುವು ಖಚಿತವಾಗಿದೆ. ಈಗಾಗಲೇ ನಿರ್ಮಲಾ ಸೀತರಾಮನ್ ಅವರಿಗೆ 46  ಮತಗಳು ಚಲಾವಣೆಯಾಗಿದ್ದು ಗೆಲುವನಿ ಬಗ್ಗೆ ಅಧಿಕೃತ ಬಾಕಿಯಿದೆ. ರಾಜ್ಯಸಭೆಗೆ ಆಯ್ಕೆಯಾಗಲು ಪ್ರತಿ ಅಭ್ಯರ್ಥಿಗೆ 45 ಮತ ಬೇಕು. ಕರ್ನಾಟಕದಲ್ಲಿ ಬಿಜೆಪಿ 121, ಕಾಂಗ್ರೆಸ್ 70, ಜೆಡಿಎಸ್ 32 ಮತಗಳನ್ನು ಹೊಂದಿವೆ.

Key words: Rajya Sabha-elections-BJP-Congress-JDS-mla-voting