ರಮೇಶ್ ಕತ್ತಿ, ಪ್ರಭಾಕರ್ ಕೋರೆಗೆ ಕೈತಪ್ಪಿದ ರಾಜ್ಯಸಭೆ ಟಿಕೆಟ್:  ಬಿಜೆಪಿಯಿಂದ ಇಬ್ಬರು ಅಭ್ಯರ್ಥಿಗಳ ಹೆಸರು ಘೋಷಣೆ…

Rajya Sabha-election- ticket -BJP
Promotion

ಬೆಂಗಳೂರು,ಜೂ,8,2020(www.justkannada.in):  ರಾಜ್ಯಸಭೆ ಚುನಾವಣೆಗೆ ಬಿಜೆಪಿ  ಅಚ್ಚರಿಯ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದೆ. ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ.

ಬೆಳಗಾವಿ ಮೂಲದ ಈರಣ್ಣ ಕಡಾಡಿ ಮತ್ತು  ರಾಯಚೂರು ಮೂಲದ ಅಶೋಕ್ ಗಸ್ತಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಈ ಮೂಲಕ ರಾಜ್ಯಸಭಾ ಟಿಕೆಟ್ ನಿರೀಕ್ಷೆಯಲ್ಲಿದ್ದ  ರಮೇಶ್ ಕತ್ತಿ ಮತ್ತು ಹಾಲಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಹಾಗೂ ಪ್ರಕಾಶ್ ಶೆಟ್ಟಿಗೆ ಬಿಜೆಪಿ ಟಿಕೆಟ್  ಕೈ ತಪ್ಪಿದೆ. Rajya Sabha-election- ticket -BJP

ರಾಜ್ಯಸಭೆ ಚುನಾವಣೆಗೆ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಅಭ್ಯರ್ಥಿಯಾಗಿ ಅಚ್ಚರಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕಕ್ಕೆ ಬಿಜೆಪಿ ಆದ್ಯತೆ ನೀಡಿದೆ.

Key words: Rajya Sabha-election- ticket -BJP