ಇಬ್ಬರು ಬಿಜೆಪಿ ಮುಖಂಡರಿಂದ ‘ಕೈ’ ನಾಯಕರ ಭೇಟಿ ವಿಚಾರ: ಸಿಎಂ ಬಿಎಸ್  ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು ಹೀಗೆ…?

Promotion

ಬೆಂಗಳೂರು,ನ,11,2019(www.justkannada.in):  ಬಿಜೆಪಿ ಮುಖಂಡರಾದ ರಾಜುಕಾಗೆ ಮತ್ತು ಅಶೋಕ್ ಪೂಜಾರಿಯಿಂದ ಕಾಂಗ್ರೆಸ್ ನಾಯಕರ ಭೇಟಿ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಿಎಸ್ ಯಡಿಯೂರಪ್ಪ ಇಬ್ಬರನ್ನೂ ಕರೆಸಿ ನಾನು ಮಾತನಾಡುತ್ತೇನೆ ಎಂದಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಬಿಎಸ್ ಯಡಿಯೂರಪ್ಪ,  ರಾಜುಕಾಗೆ ಸಿದ್ಧರಾಮಯ್ಯರನ್ನ ಭೇಟಿಯಾಗಿರುವುದು ಗೊತ್ತಿಲ್ಲ. ಕೆಲ ಬಿಜೆಪಿಯವರು ಕಾಂಗ್ರೆಸ್ ಹೋಗುತ್ತಿದ್ದಾರೆ. ಕೆಲ ಕಾಂಗ್ರೆಸ್ ನವರು ಬಿಜೆಪಿಗೆ ಬರುತ್ತಿದ್ದಾರೆ. ಅಂತಿಮವಾಗಿ ಏನಾಗುತ್ತೆ ಕಾದು ನೋಡೋಣ. ಏನೇ ಆದರೂ ಬೈ ಎಲೆಕ್ಷನ್ ನಲ್ಲಿ ಬಿಜೆಪಿ 12 ಸೀಟು ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರಾದ ರಾಜುಕಾಗೆ ಮತ್ತು ಅಶೋಕ್ ಪೂಜಾರಿ ನಿನ್ನೆ ಡಿ.ಕೆ ಶಿವಕುಮಾರ್ ರನ್ನ ಭೇಟಿಯಾಗಿದ್ದರು. ಇಂದು ರಾಜುಕಾಗೆ ಸಿದ್ಧರಾಮಯ್ಯರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Key words: raju kage –meet- siddaramaiah-CM BS yeddyurappa- reaction