ಹಿಂದೂ ಟೈಲರ್ ಕನ್ಹಯ್ಯ ಲಾಲ್ ಹಂತಕರನ್ನ ಗಲ್ಲಿಗೇರಿಸಿ ಇಲ್ಲವೇ ಗುಂಡಿಕ್ಕಿ ಕೊಲ್ಲಿ – ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ.

Promotion

ಶಿವಮೊಗ್ಗ,ಜೂನ್,29,2022(www.justkannada.in): ಹಿಂದೂ ಟೈಲರ್ ಕನ್ಹಯ್ಯ ಲಾಲ್ ರನ್ನ ಹತ್ಯೆ ಮಾಡಿದ ಹಂತಕರನ್ನ ಗಲ್ಲಿಗೇರಿಸಿ ಇಲ್ಲವೇ ಗುಂಡಿಕ್ಕಿ ಕೊಲ್ಲಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಗ್ರಹಿಸಿದ್ದಾರೆ.

ರಾಜಸ್ತಾನದ ಉದಯಪುರದಲ್ಲಿ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಶಿವಮೊಗ್ಗದಲ್ಲಿ ಇಂದು ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೆ.ಎಸ್ ಈಶ್ವರಪ್ಪ, ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡಬೇಡಿ. ದೇಶಭಕ್ತರನ್ನು ಹತ್ಯೆ ಮಾಡುವವರು ಹೇಡಿಗಳು.  ಶೀಘ‍್ರವೇ ಸಂವಿಧಾನಕ್ಕೆ ತಿದ್ದಪಡಿ ತನ್ನಿ. ಆರೋಪಿಗಳನ್ನ ಗಲ್ಲಿಗೇರಿಸಿ ಇಲ್ಲವೇ ಗುಂಡಿಕ್ಕಿ ಕೊಲ್ಲಿ ಎಂದರು.

Key words: rajasthan-murder-Hindu -Kanhaiya Lal – Former minister- KS Eshwarappa