ಈ ಹತ್ಯೆಗೆ ರಾಜಸ್ತಾನ ಸರ್ಕಾರವೇ ಜವಾಬ್ದಾರಿ: ಆರೋಪಿಗಳಿಗೆ ಗಲ್ಲುಶಿಕ್ಷೆಯಾಗಬೇಕು- ಪ್ರಮೋದ್ ಮುತಾಲಿಕ್ ಆಗ್ರಹ.

Promotion

ಧಾರವಾಡ,ಜೂನ್,29,2022(www.justkannada.in): ರಾಜಸ್ತಾನದ ಉದಯಪುರದಲ್ಲಿ ನಡೆದ ಹಿಂದೂ ಟೈಲರ್ ಕನ್ಹಯ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡಿಕಾರಿರುವ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಹಿಂದೂ ಟೈಲರ್ ಕನ್ಹಯ್ಯ ಹತ್ಯೆ ಘಟನೆ ಖಂಡಿಸಿ ಧಾರವಾಡದಲ್ಲಿ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಮಾತನಾಡಿದ ಪ್ರಮೋದ್ ಮುತಾಲಿಕ್, ಇದು ಇಡೀ ದೇಶವೇ ತಲೆತಗ್ಗಿಸುವ ಕೃತ್ಯ.  ಈ ಹತ್ಯೆಗೆ ರಾಜಸ್ತಾನ ಸರ್ಕಾರವೇ ಜವಾಬ್ದಾರಿ.  ಕಾಂಗ್ರೆಸ್ ಪಕ್ಷ ಉಗ್ರರನ್ನ ಬೆಳೆಸುತ್ತಿದೆ . ಸರ್ಕಾರ ನಾಟಕ ಮಾಡೋದನ್ನ ನಿಲ್ಲಿಸಬೇಕು. ನಮ್ಮ ದೇಶದ ಕಾನೂನು ದುರ್ಬಲವಾಗಿದೆ. ಆರೋಪಿಗಳು ಜಾಮೀನಿನ ಮೇಲೆ ಹೊರಬಂದು ಮತ್ತೆ ಕೊಲೆ ಮಾಡುತ್ತಾರೆ. ಇಸ್ಲಾಮಿಕ್ ಮಾನಸಿಕತೆ ಅಪಾಯಕಾರಿ .ಸುಮ್ಮನೆ ಮಾತನಾಡಿದ್ರೆ ಆಗಲ್ಲ. ಆರೋಪಿಗಳಿಗೆ ಗಲ್ಲುಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ನಾನು ಕನ್ಹಯ್ಯ ಲಾಲ್ ನೂಪುರ್ ಶರ್ಮಾ ಬೆಂಬಲಿಗ. ಲಕ್ಷಾಂತರ ಜನರು  ನೂಪುರ್ ಶರ್ಮಾ ಅವರನ್ನ ಬೆಂಬಲಿಸುತ್ತೇವೆ.  ತಾಕತ್ತಿದ್ರೆ ಬನ್ನಿ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಗುಡುಗಿದರು.

Key words: rajastan-murder-case-pramod muthalik