Sunday, September 27, 2026

BDA Apartments

Home Front Page  ಕೆಆರ್ ಎಸ್ ನಿಂದ ಭಾರಿ ಪ್ರಮಾಣದ ನೀರು ಬಿಡುಗಡೆ: ದೋಣಿವಿಹಾರ ಕೇಂದ್ರ ಮುಳುಗಡೆ.

 ಕೆಆರ್ ಎಸ್ ನಿಂದ ಭಾರಿ ಪ್ರಮಾಣದ ನೀರು ಬಿಡುಗಡೆ: ದೋಣಿವಿಹಾರ ಕೇಂದ್ರ ಮುಳುಗಡೆ.

ಮಂಡ್ಯ,ಆಗಸ್ಟ್,6,2022(www.justkannada.in): ರಾಜ್ಯದಲ್ಲಿ ಮಳೆರಾಯ ಬಿಟ್ಟುಬಿಡದೇ ಅಬ್ಬರಿಸುತ್ತಿದ್ದು, ರಾಜ್ಯದ ನದಿಗಳು ತುಂಬಿ ಹರಿಯುತ್ತಿದೆ. ಈ ಮಧ್ಯೆ ಕೊಡಗು, ಮೈಸೂರು ಭಾಗದಲ್ಲಿ ಹೆಚ್ಚಿನ ಮಳೆಯಾಗಿರುವುದರಿಂದ ಕೆಆರ್ ಎಸ್ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಕೆಆರ್ ಎಸ್ ಜಲಾಶಯದಿಂದ 78 ಸಾವಿರ ಕ್ಯೂಸೆಕ್ ನೀರನ್ನ ನದಿಗೆ ಬಿಡಲಾಗಿದ್ದು, ಈ ಹಿನ್ನೆಲೆಯಲ್ಲಿ ಕೆಆರ್ ಎಸ್ ನ ಬೃಂದಾವನಕ್ಕೂ ನೀರು ನುಗ್ಗಿದೆ.  ದೋಣಿವಿಹಾರ ಕೇಂದ್ರವೂ ಮುಳುಗಡೆಯಾಗಿದ್ದು, ದೋಣಿವಿಹಾರ. ಸಂಗೀತ ಕಾರಂಜಿ ಸ್ಥಗಿತವಾಗಿದೆ.ಕೆಆರ್ ಎಸ್ ನಿಂದ ಭಾರಿ ಪ್ರಮಾಣದ ನೀರು ಬಿಡುಗಡೆ krs

ಕೊಡಗಿನಲ್ಲಿ ಧಾರಾಕಾರ ಮಳೆಯಿಂದ ಕಾವೇರಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು ಕಾವೇರಿ ಜಲಾನಯನ ಪ್ರದೇಶದ ಜನರಿಗೆ ಆತಂಕ ಎದುರಾಗಿದೆ.

Key words: rain-krs-dam-caveri-river