ಮೈಸೂರು-ಬೆಂಗಳೂರು ನಡುವಿನ ರೈಲ್ವೆ ಟ್ರ್ಯಾಕ್ ನಿರ್ವಹಣೆ ಬಗ್ಗೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಮೆಚ್ಚುಗೆ

Promotion

ಮೈಸೂರು,ಅಕ್ಟೋಬರ್,31,2020(www.justkannada.in): ಮೈಸೂರು-ಬೆಂಗಳೂರು ನಡುವಿನ ರೈಲ್ವೆ ಟ್ರಾಕ್ ನಿರ್ವಹಣೆ ಬಗ್ಗೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಟ್ವಿಟ್ಟರ್ ನಲ್ಲಿ ವೀಡಿಯೋ ವೊಂದನ್ನ ಪೋಸ್ಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. Railway Minister -Piyush Goyal -appreciates -maintenance - rail track –between- Mysore and Bangalore.

ಮೈಸೂರು-ಬೆಂಗಳೂರು ನಡುವಿನ ರೈಲ್ವೆ ಟ್ರಾಕ್ ನಿರ್ವಹಣೆ ಕುರಿತು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿರುವ  ಕೇಂದ್ರ ರೈಲ್ವೆ ಸಚಿವ ಫಿಯೂಷ್ ಗೋಯೆಲ್,  ಮೈಸೂರು-ಬೆಂಗಳೂರಿನ ಸಂಚಾರ ಅತಿ ಸೂಕ್ಷ್ಮ ಹಾಗೂ ಸರಳ. ಅತಿ ವೇಗವಾಗಿ ಚಲಿಸುವ ರೈಲಿನಲ್ಲಿ ಒಂದು ಗ್ಲಾಸ್ ನ ನೀರು ಇಟ್ಟರೆ ಒಂದು ಹನಿಯು ಸಹಾ ಹೊರ ಬೀಳುವುದಿಲ್ಲ, ಅಷ್ಟು ಸರಾಗವಾಗಿ ಪ್ರಯಾಣಿಸಬಹುದು.! ಅಷ್ಟರಮಟ್ಟಿಗೆ ಉತ್ತಮ ಮಟ್ಟದ ರೈಲ್ವೆ ಟ್ರಾಕ್ ನಿರ್ವಹಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. Railway Minister -Piyush Goyal -appreciates -maintenance - rail track –between- Mysore and Bangalore.

ಅಲ್ಲದೆ ಈ ಕುರಿತ ಪ್ರಯೋಗದ ವೀಡಿಯೊವೊಂದನ್ನ ಟ್ವಿಟ್ಟರ್ ನಲ್ಲಿ ಹಾಕಿ ನಿರ್ವಹಣೆ ಫಲಿತಾಂಶ ನೀವೆ ನೋಡಿ ಎಂದು ಸಚಿವ ಪಿಯೂಶ್ ಗೋಯೆಲ್  ಹೇಳಿದ್ದಾರೆ.

Key words: Railway Minister -Piyush Goyal -appreciates -maintenance – rail track –between- Mysore and Bangalore.