ಎರಡು ತಿಂಗಳ ಬಳಿಕ ರೈಲ್ವೆ ಪ್ಯಾಸೆಂಜರ್ ರೈಲು ಸೇವೆ ಪುನರಾರಂಭ

Promotion

ಹೊಸದಿಲ್ಲಿ, ಮೇ 12, 2020 (www.justkannada.in): ಲಾಕ್‌ಡೌನ್ ಘೋಷಣೆಯಾದ ಸುಮಾರು ಎರಡು ತಿಂಗಳುಗಳ ಬಳಿಕ ಭಾರತೀಯ ರೈಲ್ವೆಯು ಪ್ಯಾಸೆಂಜರ್ ರೈಲುಗಳ ಸೇವೆಯನ್ನು ಪುನರಾರಂಭಿಸಿದೆ.

ರೈಲ್ವೆ ಇಲಾಖೆ ಸೋಮವಾರದಿಂದ ದಿಲ್ಲಿಯಿಂದ ಮುಂಬೈ, ಚೆನ್ನೈ, ಬೆಂಗಳೂರು, ಕೋಲ್ಕತಾ ಸಹಿತ ದೊಡ್ಡ ನಗರಗಳ ಸಂಪರ್ಕಿಸುವ 15 ರೈಲುಗಳ ಬುಕ್ಕಿಂಗ್ ಸಂಜೆ 6 ಗಂಟೆಗೆ ಆರಂಭಿಸಿದ್ದು,ಸುಮಾರು 54,000 ಜನರು ಬುಕ್ಕಿಂಗ್ ಮಾಡಿದ್ದಾರೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್‌ನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಕಡ್ಡಾಯ ಎಂದು ರೈಲ್ವೆ ಇಲಾಖೆ ತಿಳಿಸಿದೆ.