ಕೇಸ್ ಹಿಂದೆಯೇ ಮುಗಿದು ಹೋಗಿದ್ರೂ ರಾಜಕೀಯ ದ್ವೇಷದಿಂದ ರಾಹುಲ್ ವಿಚಾರಣೆ: ಸಿದ‍್ಧರಾಮಯ್ಯ ಕಿಡಿ.

Promotion

ನವದೆಹಲಿ,ಜೂನ್,22,2022(www.justkannada.in): ಈ ಹಿಂದೆಯೇ ನ್ಯಾಷನಲ್ ಹೆರಾಲ್ಡ್ ಪ್ರಕರಣ ಮುಗಿದು ಹೋಗಿದ್ರೂ ರಾಜಕೀಯ ದ್ವೇಷದಿಂದ ವಿಚಾರಣೆ ಹೆಸರಿನಲ್ಲಿ ರಾಹುಲ್ ಗಾಂಧಿಗೆ ಕಿರುಕುಳ  ನೀಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಕಿಡಿಕಾರಿದರು.

ನವದೆಹಲಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ರಾಜಕೀಯ ದ್ವೇಷದಿಂದ ರಾಹುಲ್ ಗಾಂಧಿ ವಿಚಾರಣೆ ನಡೆಸುತ್ತಿದ್ದಾರೆ.  ವಿಚಾರಣೇ ಅಂದರೆ 3ರಿಂದ 4 ತಾಸು ಮಾಡಬಹುದು. ಆದರೆ  54 ಗಂಟೆಗಳ ಕಾಲ ವಿಚಾರಣೆ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದಾರೆ. ಹಿಂದೆಯೇ ಕೇಸ್ ಮುಗಿದು ಹೋಗಿದೆ.  ಆದರೂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆಂಡ ಕಾರಿದರು.

ಇದೇ ವೇಳೆ ಆರ್ ಎಸ್ ಎಸ್ ವಿರುದ್ಧವೂ ಗುಡುಗಿದ ಸಿದ್ಧರಾಮಯ್ಯ, ಆರ್ ಎಸ್ ಎಸ್ ನವರು ಯಾವಾಗಲೂ ಸುಳ್ಳು ಹೇಳುತ್ತಾರೆ. ಸುಳ್ಳು ಹುಟ್ಟಿರುವುದೇ ಆರ್ ಎಸ್ ಎಸ್ ನವರಿಂದ.  ಸಿಟಿ ರವಿ ಕೂಡ ಆರ್ ಎಸ್ ಎಸ್ ನವನು.  ಅಗ್ನಿಪಥ್ ಯೋಜನೆ ವಿರುದ್ಧವೂ ಪ್ರತಿಭಟನೆ ನಡೆಸುತ್ತೇವೆ.  ಅಗ್ನಿಪಥ್ ಯೋಜನೆ ಯುವಕರಿಗೆ ಮಾರಕ ಎಂದು ವಾಗ್ದಾಳಿ ನಡೆಸಿದರು.

Key words: Rahul Gandhi- inquiry –political-former cm-Siddaramaiah