ರಾಹುಲ್ ಗಾಂಧಿ ಕುಂಕುಮ ಹಚ್ಚಿಕೊಂಡು ನಾಟಕ ಮಾಡ್ತಾರೆ-ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

Promotion

ಹುಬ್ಬಳ್ಳಿ,ಜನವರಿ,7,2023(www.justkannada.in):  ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ. ಆಡಳಿತ ಮತ್ತು ವಿಪಕ್ಷಗಳ ನಡುವಿನ ಆರೋಪ – ಪ್ರತ್ಯಾರೋಪ  ಮುಂದುವರೆದಿದ್ದು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು  ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಹ್ಲಾದ್ ಜೋಶಿ , ಹಿಂದೂ ಹಾಗೂ ಹಿಂದುತ್ವಕ್ಕೆ ಏನು ವ್ಯತ್ಯಾಸವಿಲ್ಲ. ಹಿಂದು ದ್ವೇಷಿ ಸಿದ್ದರಾಮಯ್ಯ ಸನಾತನ ಧರ್ಮ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ರಾಹುಲ್‌ ಗಾಂಧಿ , ಸಿದ್ದರಾಮಯ್ಯನವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಅವರೇ ಕುಂಕುಮ ಹಚ್ಚಿಕೊಂಡು ನಾಟಕ ಮಾಡುತ್ತಾರೆ ಎಂದು ಕಿಡಿಕಾರಿದರು.

ಗಣರಾಜ್ಯೋತ್ಸವಕ್ಕೆ ಕರ್ನಾಟಕ ಸ್ತಬ್ಧಚಿತ್ರಕ್ಕೆ ಅನುಮತಿ ನಿರಾಕರಣೆ ಹಿನ್ನೆಲೆ ಕೋರ್ಟ್ ಮೊರೆ ಹೋಗುವುದಾಗಿ ಕಸಾಪ ಅಧ್ಯಕ್ಷ ಮಹೇಶ್ ಜೋಶಿ  ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಈ ಕುರಿತು ಕೋರ್ಟ್  ಮೊರೆ ಹೋಗುವುದರಿಂದ ಏನು ಆಗುವುದಿಲ್ಲ. ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಜೊತೆ ಮಾತನಾಡುತ್ತೇನೆ. 13 ವರ್ಷದಿಂದ ಸ್ತಬ್ದಚಿತ್ರ ಇತ್ತು. ಹೀಗಾಗಿ ಈ ವರ್ಷ ಇಲ್ಲ. ಕಳೆದ ಬಾರಿ ಕೇರಳ ಸ್ತಬ್ದ ಚಿತ್ರ ಇರಲಿಲ್ಲ . ಅವರು ಹೀಗೆ ಗಲಾಟೆ ಮಾಡಿದರು. ಪ್ರತಿ ವರ್ಷ ವಿವಾದ ಮಾಡೋದು ಸರಿಯಲ್ಲ ಎಂದರು.

Key words:  Rahul Gandhi – drama -Union Minister -Prahlad Joshi.