ಬಡ ಕೂಲಿ ಕಾರ್ಮಿಕ ಕುಟುಂಬಗಳಿಗೆ ನೆರವಾದ ನಟಿ ರಾಗಿಣಿ

Promotion

ಬೆಂಗಳೂರು, ಮೇ 20, 2020 (www.justkannada.in): ನಟಿ ರಾಗಿಣಿ ದ್ವಿವೇದಿ ಅವರು ಇಂದು ಬಡ ಕೂಲಿ ಕಾರ್ಮಿಕರ ಕುಟುಂಬಗಳಿಗೆ ನಿತ್ಯ ಬಳಕೆ ಆಹಾರ ಕಿಟ್ ವಿತರಿಸಿದರು.

ಬೆಂಗಳೂರಿನಲ್ಲಿ ಹಲವು ಕುಟುಂಬಗಳಿಗೆ 21 ದಿನಗಳಿಗೆ ಆಗುವಷ್ಟು ದಿನ ಬಳಕೆ ಕಿಟ್ ವಿತರಿಸುವ ಮೂಲಕ ಬಡ ಕುಟುಂಬಗಳಿಗೆ ನೆರವಾದರು. ಆರ್ ಡಿ ವೆಲ್ಫೇರ್ ಹಾಗೂ ಇಶಾ ಫೌಂಡೇಷನ್ ಸಹಯೋಗದಲ್ಲಿ ಈ ಸೇವಾ ಕಾರ್ಯ ನಡೆಯಿತು.

ಸ್ವತಃ ನಟಿ ರಾಗಿಣಿ ಅವರು ಎಲ್ಲ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದರು.