2021 ರ ಮೊದಲ ಚಿತ್ರ ಅನೌನ್ಸ್ ಮಾಡಿದ ರಾಗಿಣಿ

Promotion

ಬೆಂಗಳೂರು, ಫೆಬ್ರವರಿ 25, 2021 (www.justkannada.in): ಜೈಲಿನಿಂದ ಬಿಡುಗಡೆಯಾಗಿರುವ ರಾಗಿಣಿ ದ್ವಿವೇದಿ 2021 ರ ತಮ್ಮ ಮೊದಲ ಚಿತ್ರವನ್ನು ಪ್ರಕಟಿಸಿದ್ದಾರೆ.

2021 ರ ಮೊದಲ ಚಿತ್ರ – ಕರ್ವ-3 ಘೋಷಿಸಲು ನಾನು ರೋಮಾಂಚನಗೊಂಡಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ರಾಗಿಣಿ ಹೇಳಿದ್ದಾರೆ.

ತಿಲಕ್ ಮತ್ತು ಮೇಘನಾ ಗಾಂವ್ಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದಲ್ಲಿ ರಾಗಿಣಿ ಪ್ರಮುಖ ಪಾತ್ರವೊಂದನ್ನು ಮಾಡಲಿದ್ದಾರೆ.

ಚೊಚ್ಚಲ ಚಿತ್ರ ನಿರ್ದೇಶನ ಮಾಡುತ್ತಿರುವ ನಿರ್ದೇಶಕ ವಿಶಾಲ್ ಶೇಖರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ ಮಾರ್ಚ್‌ನಲ್ಲಿ ಸೆಟ್‌ಗೆ ಸೇರುವ ನಿರೀಕ್ಷೆಯಿದೆ.