ಕಿರಿತೆರೆಗೆ ಹಿರಿತೆರೆಯ ರಾಧಿಕಾ ಚೇತನ್ ಎಂಟ್ರಿ !

Promotion

ಬೆಂಗಳೂರು, 29 ಅಕ್ಟೋಬರ್ 2020 (www.justkannada.in): ರಂಗಿತರಂಗ ಖ್ಯಾತಿಯ ನಟಿ ರಾಧಿಕಾ ಚೇತನ್ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ಹೌದು. ನಟಿ ರಾಧಿಕಾ ಚೇತನ್‌ಅವರು ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ಅವರು ಎಂಟ್ರಿ ಕೊಡುತ್ತಿರುವುದು ಉದಯ ಟಿವಿಗೆಯ ಆಕೃತಿ ಧಾರವಾಹಿಗೆ.

ರಾಧಿಕಾ ಚೇತನ್‌ಅವರು ಯಾವ ರೀತಿಯಾಗಿ ಆಕೃತಿ ಮತ್ತು ಮನಸಾರೆ ಪಾತ್ರಗಳಿಗೆ ಶಕ್ತಿಯಾಗಿ ನಿಲ್ಲುತ್ತಾರೆ ಎಂಬ ಹಲವು ರೋಚಕ ಸನ್ನಿವೇಶಗಳನ್ನೊಳಗೊಂಡಿರುವ ವಿಶೇಷ ಸಂಚಿಕೆಯೇ ಮನಸಾರೆ ಆಕೃತಿ ಮಹಾಸಂಗಮ.

ಅದ್ಧೂರಿ ವಿಶೇಷ ಸಂಚಿಕೆಗಳು ಶನಿವಾರ ಮತ್ತು ಭಾನುವಾರ ರಾತ್ರಿ 9:30 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.