ಹೊಸ ಕೇಂದ್ರಡಳಿತ ಪ್ರದೇಶ ಲಡಾಖ್ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ರಾಧಾಕೃಷ್ಣ ಮಾಥುರ್ ಪ್ರಮಾಣ ವಚನ

Promotion

ಲಡಾಖ್, ಅಕ್ಟೋಬರ್ 31, 2019 (www.justkannada.in): ಹೊಸ ಕೇಂದ್ರಾಡಳಿತ ಪ್ರದೇಶ ಲಡಾಖ್ ನ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ರಾಧಾ ಕೃಷ್ಣ ಮಾಥುರ್ ಪ್ರಮಾಣವಚನ ಸ್ವೀಕರಿಸಿದರು.

1977 ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದ ಮಾಥುರ್, 2018 ರಲ್ಲಿ ಭಾರತದ ಮುಖ್ಯ ಮಾಹಿತಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಲಡಾಖ್ ನ ಲೆಫ್ಟಿನೆಂಟ್ ಗವರ್ನರ್ ಆಗುವುದಕ್ಕೂ ಮುನ್ನ 65 ವರ್ಷ ವಯಸ್ಸಿನ ಮಾಥುರ್ ಭದ್ರತಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಐಐಟಿ ಕಾನ್ಪುರದಲ್ಲಿ ಓದಿದ್ದ ಮಾಥುರ್, ಸ್ಲೊವೆನಿಯಅದ ಇಂಟರ್ನ್ಯಾಶ್ನಲ್ ಸೆಂಟರ್ ಫಾರ್ ಪ್ರಮೋಶನ್ ಆಫ್ ಎಂಟರ್ ಪ್ರೈಸಸ್ (ಐಸಿಪಿಇ) ನಲ್ಲಿ ಎಂಬಿಎ ಪದವಿ ಪಡೆದಿದ್ದರು.