‘ಏಕ್ ಲವ್ ಯಾ’ ಟೀಸರ್’ಗಿಂತ ರಚಿತಾ ಸಿಗರೇಟ್ ಸೇದಿದ್ದು, ಲಿಪ್ ಲಾಕ್ ಮಾಡಿದ್ದೇ ದೊಡ್ ಸುದ್ದಿ !

Promotion

ಬೆಂಗಳೂರು, ಫೆಬ್ರವರಿ 15, 2019 (www.justkannada.in): ಏಕ್ ಲವ್ ಯಾ ಮೋಷನ್ ಪೋಸ್ಟರ್ ನಲ್ಲಿ ಬಿಯರ್ ಬಾಟಲಿ ಹಿಡಿದಿದ್ದ ರಚಿತಾ ರಾಮ್ ಟೀಸರ್ ನಲ್ಲಿ ಸಿಗರೇಟು ಸೇದುವ ಬೋಲ್ಡ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.

ರಚಿತಾ ಈ ಅವತಾರದ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಏಕ್ ಲವ್ ಯಾ ಟೀಸರ್ ಗಿಂತ ರಚಿತಾ ರಾಮ್ ದಮ್ ಎಳೆಯೋದೇ ಸುದ್ದಿಯಾಗಿಬಿಟ್ಟಿದೆ. ಅದೂ ಸಾಲದೆಂಬಂತೆ ಕೊನೆಯಲ್ಲಿ ಲಿಪ್ ಲಾಕ್ ದೃಶ್ಯವೂ ಇದೆ.

ಇದರ ಬಗ್ಗೆ ರಚಿತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, ‘ಎಲ್ಲಾ ನಮ್ಮ ನಿರ್ಮಾಪಕರ ಕೃಪೆ’ ಎಂದು ಏಕ್ ಲವ್ ಯಾ ನಿರ್ಮಾಪಕಿ ರಕ್ಷಿತಾ ಪ್ರೇಮ್ ಮೇಲೆ ತಮಾಷೆಯಾಗಿ ಕಾಲೆಳೆದಿದ್ಧಾರೆ.