ಮರ್ಸಿಡಿಸ್ ಬೆನ್ಜ್ ಖರೀದಿಸಿದ ಡಿಂಪಲ್ ಕ್ವೀನ್ !

Promotion

ಬೆಂಗಳೂರು, ನವೆಂಬರ್ 20, 2019 (www.justkannada.in): ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಮರ್ಸಿಡಿಸ್ ಬೆನ್ಜ್ ಕಾರು ಖರೀದಿಸಿದ್ದಾರೆ.

ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇರುವ ರಚಿತಾ ದುಬಾರಿ ಕಾರು ಖರೀದಿಸಿದ ಖುಷಿಯಲ್ಲಿದ್ದಾರೆ.

ಹೌದು. ರಚಿತಾ ರಾಮ್ ಕೊಂಡುಕೊಂಡ ಬೆನ್ಜ್ ಕಾರಿನ ಬೆಲೆ ಸುಮಾರು 90 ಲಕ್ಷ ಎಂದು ಹೇಳಲಾಗಿದೆ. ಇದು ಅವರ ಕನಸಿನ ಕಾರು ಕೂಡ ಹೌದು. ಡಾರ್ಕ್ ನೀಲಿ ಬಣ್ಣದ ಕಾರ್ ಇದಾಗಿದೆ.

ಇದೇ ನವೆಂಬರ್ 15 ರಂದು ಖರೀದಿಸಲಾಗಿದೆ ಎಂದು ಹೇಳಲಾಗಿದೆ. ಇನ್ನು ರಚಿತಾ ತಮ್ಮ ಅಕ್ಕನ ಮದುವೆ ತಯಾರಿಯಲ್ಲಿ ಬ್ಯುಸಿ . ಡಿಸೆಂಬರ್ ಮೊದಲನೇ ವಾರದಲ್ಲಿ ನಿತ್ಯಾ ರಾಮ್ ಮದುವೆಯಿದ್ದು ಹೊಸ ಕಾರಿನಲ್ಲಿ ಅಕ್ಕನ ಮದುವೆ ಅದ್ದೂರಿಯಾಗಿ ಆಚರಿಸಲಿದ್ದಾರೆ.